ಯುವತಿಗೆ ಮಗುವಿನ ಭಾಗ್ಯ ಪ್ರಕರಣ: ಬಿಜೆಪಿ ಮುಖಂಡನ ಕಾರಲ್ಲಿ ಆರೋಪಿ ಪೊಟೋ ವೈರಲ್..!

ಯುವತಿಗೆ ಮಗುವಿನ ಭಾಗ್ಯ ಪ್ರಕರಣ: ಬಿಜೆಪಿ ಮುಖಂಡನ ಕಾರಲ್ಲಿ ಆರೋಪಿ ಪೊಟೋ ವೈರಲ್..!


ಪುತ್ತೂರು: ಯುವತಿಗೆ ಮಗುವಿನ ಭಾಗ್ಯ ಕೊಟ್ಟು ಪರಾರಿಯಾಗಿರುವ ಆರೋಪಿ ಯುವಕನಿಗಾಗಿ ಕಳೆದ 10 ದಿನಗಳಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇದೀಗ ಈತನನ್ನು ಕಾರೊಂದರಲ್ಲಿ ಬಿಜೆಪಿ ಮುಖಂಡನೋರ್ವ ಕರೆದೊಯ್ಯುತ್ತಿರುವ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆರ್ಯಾಪು ಗ್ರಾಮದ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷನ ಜತೆಗೆ ಕಾರಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕ್ಯಾಮರಾದಿಂದ ಸೆಲ್ಪಿ ಪೊಟೋ ಕ್ಲಿಕ್ಕಿಸಲಾಗಿದೆ. ಜತೆಗೆ ಕಾರಿನ ಹಿಂಬದಿ ಸೀಟಿನಲ್ಲಿ ಇಬ್ಬರ ನಡುವೆ ತಲೆತಗ್ಗಿಸಿಕೊಂಡು ಆರೋಪಿ ಶ್ರೀಕೃಷ್ಣ ಕುಳಿತಿದ್ದಾನೆ. ಇದರೊಂದಿಗೆ ಈ ಪರಾರಿ ನಾಟಕದಲ್ಲಿ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 

ಬಪ್ಪಳಿಗೆ ನಿವಾಸಿ ಪಿ.ಜಿ.ಜಗನ್ನಿವಾಸ ರಾವ್ ಅವರು ಪುತ್ರ ಶ್ರೀಕೃಷ್ಣ ರಾವ್ ಯುವತಿಯೊಬ್ಬಳನ್ನು ನಂಬಿಸಿ ವಂಚಿಸಿದ ಪ್ರಕರಣ ಪುತ್ತೂರು ಮಹಿಳಾ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ಕಳೆದ ಒಂದೂವರೆ ತಿಂಗಳಿನಿಂದ ಈ ಪ್ರಕರಣ ಜಿಲ್ಲೆಯಾದ್ಯಂತ ಸುದ್ದಿ ಮಾಡುತ್ತಿದೆ. ಪುತ್ತೂರು ನಗರಸಭೆಯ ಸದಸ್ಯ ಹಾಗೂ ಬಿಜೆಪಿ ನಗರಮಂಡಲದ ಮಾಜಿ ಅಧ್ಯಕ್ಷನ ಪುತ್ರನಿಂದ ನಡೆದ ಈ ವಂಚನೆಯ ವಿರುದ್ಧ ಇದೀಗ ಹಲವು ಸಂಘಟನೆಗಳು ಧ್ವನಿ ಎತ್ತುವ ಕೆಲಸ ಮಾಡುತ್ತಿವೆ. ಮದುವೆಯಾಗುವುದಾಗಿ ನಂಬಿಸಿ ಯುವತಿ ಗರ್ಭವತಿಯಾಗುವಂತೆ ಮಾಡಿದ ಶ್ರೀಕೃಷ್ಣ ರಾವ್ ಪೊಲೀಸ್ ಠಾಣೆಯಲ್ಲಿಯೂ ಮದುವೆಯಾಗುವ ಬಗ್ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದ. ಇದಕ್ಕೆ ಆತನ ತಂದೆಯೂ ಸಾಕ್ಷಿಯಾಗಿದ್ದರು. ಆತನಿಗೆ ಜೂ.23ಕ್ಕೆ 21 ವರ್ಷ ತುಂಬಲಿದ್ದು, ಜೂ.೨೪ಕ್ಕೆ ರಿಜಿಸ್ಟರ್ ಮ್ಯಾರೇಜ್ ಮಾಡುವುದಾಗಿ ಮೊದಲ ಹಂತದಲ್ಲಿ ಕೇಸಿನಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡಿದ ಈ ಯುವಕನ ಕುಟುಂಬ ಜೂ.22ರಂದು ತನ್ನ ವರಸೆಯನ್ನೇ ಬದಲಾಯಿಸಿ ಮದುವೆ ಯಾಗೋದಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ಯುವತಿ ಮನೆಯವರಿಗೆ ನೀಡಿದ್ದರು. 

ಈ ನಡುವೆ ಮಗುವನ್ನು ತೆಗೆಸಲೂ ಸಾಕಷ್ಟು ಪ್ರಯತ್ನ ಈ ಯುವಕನ ಕುಟುಂಬದಿಂದ ನಡೆದಿತ್ತಾದರೂ ಆ ಪ್ರಯತ್ನಗಳು ವಿಫಲವಾಗಿದ್ದವು. ಜೂನ್ 24ರಂದು ಎರಡನೇ ಬಾರಿಗೆ ಮಹಿಳಾ ಠಾಣೆಯ ಮೆಟ್ಟಲೇರಿದ ಈ ಯುವತಿಯ ಕುಟುಂಬ ಪ್ರಕರಣ ದಾಖಲಿಸಿತ್ತು. ಪ್ರಕರಣ ದಾಖಲಾಗುತ್ತಿರುವಂತೆ ಆರೋಪಿ ಶ್ರೀಕೃಷ್ಣ ನಾಪತ್ತೆಯಾಗಿದ್ದ. ಅಪ್ಪ ಪಿಜಿ ಜಗನ್ನೀವಾಸ ರಾವ್ ಅಸೌಖ್ಯದಿಂದ ಆಸ್ಪತ್ರೆ ಸೇರಿಕೊಂಡರು. ಈ ನಡುವೆ ಆರೋಪಿಗೆ ನಿರೀಕ್ಷಣಾ ಜಾಮೀನು ಪಡೆಯಲು ಪ್ರಯತ್ನವೂ ನಡೆಸಲಾಗಿದೆ. ಆದರೆ ನಿರೀಕ್ಷಣಾ ಜಾಮೀನಿನ ಅರ್ಜಿ ವಿಚಾರಣೆ ಎರಡು ಹಂತದಲ್ಲಿ ಮುಂದೂಡಿದ ಕಾರಣ ಈ ಬಗ್ಗೆ ನಡೆದಿದ್ದ ಯೋಜನೆಗಳು ತಲೆಕೆಳಗಾಗಿವೆ. ಇದೀಗ ಆರೋಪಿಯ ಪರಾರಿಗೆ 10 ದಿನಗಳಾಗಿದ್ದು, ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೊಟೊ ಸಂಚಲನ ಸೃಷ್ಟಿಸಿದೆ.

ಆರೋಪಿ ಬಂಧನಕ್ಕೆ 2 ದಿನ ಗಡುವು:

ಯುವತಿಗೆ ಮಗುವೊಂದನ್ನು ನೀಡಿ ಪರಾರಿಯಾದ ಆರೋಪಿಯನ್ನು 2 ದಿನಗಳಲ್ಲಿ ಬಂಧಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಜಿಲ್ಲಾ ಎಸ್ಪಿ ಅವರಿಗೆ ಸೂಚನೆ ನೀಡಿದ್ದಾರೆ. ಎಸ್ಪಿಯವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಶಾಸಕರು ಆರೋಪಿ ಎಲ್ಲಿಯೇ ಇದ್ದರೂ ಆತನನ್ನು ಬಂಧಿಸಬೇಕು. ಆರೋಪಿಯ ಬಂಧನ ವಿಳಂಬದ ಬಗ್ಗೆ ಮಾದ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. 2 ದಿನಗಳೊಳಗೆ ಆತನನ್ನು ಬಂಧಿಸಿ ಯುವತಿಗೆ ನ್ಯಾಯ ಒದಗಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕು. ಈ ಬಗ್ಗೆ ನನ್ನಿಂದ ಯಾವ ಸಹಕಾರ ಬೇಕಾದರೂ ನೀಡಲು ಸಿದ್ಧ ಎಂದು ಎಸ್ಪಿಯವರಿಗೆ ಶಾಸಕರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article