ಸ್ವಚ್ಛತೆ, ಆರೋಗ್ಯದ ಮಹತ್ವ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ

ಸ್ವಚ್ಛತೆ, ಆರೋಗ್ಯದ ಮಹತ್ವ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಮಾಹಿತಿ


ಮೂಡುಬಿದಿರೆ: ತಾಲೂಕಿನ ಪಡುಮಾರ್ನಾಡು ಗ್ರಾಮದ ಪಾಡ್ಯಾರು ಸರಕಾರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಶುಕ್ರವಾರ ವೈಯಕ್ತಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ವಚ್ಛತೆಯ ಅಗತ್ಯ, ಉಪಯೋಗಿಸುವ ತೆಳು ಪ್ಲಾಸ್ಟಿಕ್ ಬಿಸಾಡುವುದರಿಂದ ಪರಿಸರಕ್ಕೆ ಆಗುವ ಹಾನಿ, ಪ್ಲಾಸ್ಟಿಕ್ ನಿಷೇಧದ ಅಗತ್ಯದ ಕುರಿತು ವಿವಿಧ ಉದಾಹರಣೆಗಳ ಮೂಲಕ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ,  ಪತ್ರಕತ೯ ರಾಯಿ ರಾಜಕುಮಾರ ಮೂಡುಬಿದಿರೆ ಅವರು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಪಯುಕ್ತ ಕಥೆ ಹಾಗೂ ಲೇಖನಗಳ ಪುಸ್ತಕಗಳನ್ನು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಲೈಬ್ರರಿಗೆ ನೀಡಿದರು. 

ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಸ್ವಾಗತಿಸಿದರು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ರಾಬರ್ಟ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article