
ಹೊಟೇಲ್ ಮಾಲಕ ನಿತಿನ್ ಪೂಜಾರಿ ಆತ್ಮಹತ್ಯೆ
Tuesday, July 22, 2025
ಮಂಗಳೂರು: ನಗರದ ಕದ್ರಿ ಕಂಬಳ ಬಳಿಯ ಕೊಡಕ್ಕೆನ ಹೆಸರಿನ ಹೊಟೇಲ್ ಮಾಲಕ ನಿತಿನ್ ಪೂಜಾರಿ (41) ಹಣಕಾಸು ಮುಗ್ಗಟ್ಟಿನಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಜೆಪಿ ನಾಯಕರು, ಶಾಸಕರ ಜೊತೆಗೆ ಒಡನಾಟದಲ್ಲಿದ್ದ ನಿತಿನ್ ಎಂಟು ತಿಂಗಳ ಹಿಂದೆ ಸ್ವಂತ ಉದ್ಯಮ ಸ್ಥಾಪನೆಯ ಉದ್ದೇಶದಿಂದ ಕದ್ರಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ತೆರೆದಿದ್ದರು. ಹಿಂದೆ ಅವರು ಮುಡಿಪುವಿನಲ್ಲಿ ಪಾಲುದಾರಿಕೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ಕೊಡೆಕ್ಕೆನ ಅಲ್ಪ ಸಮಯದಲ್ಲಿ ಒಳ್ಳೆಯ ಹೆಸರು ಪಡೆದಿತ್ತು. ಕಳೆದ ರಾತ್ರಿ ಮಣ್ಣಗುಡ್ಡದ ಗುಂಡೂರಾವ್ ಲೇನಲ್ಲಿರುವ ಪ್ಲ್ಯಾಟ್‌ನಲ್ಲಿ ವಿಷ ಸೇವಿಸಿದ್ದು ತಡರಾತ್ರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಸುಕಿನಲ್ಲಿ ಮೃತಪಟ್ಟಿದ್ದಾರೆ. ನಿತಿನ್ ಅವಿವಾಹಿತರಾಗಿದ್ದು ಗೆಳೆಯರ ಒಡನಾಟ ಹೆಚ್ಚಿತ್ತು. ಮೂಲತಃ ಮರೋಳಿಯವರಾಗಿದ್ದು ಇತ್ತೀಚೆಗಷ್ಟೇ ಮಣ್ಣಗುಡ್ಡದಲ್ಲಿ ಪ್ಲ್ಯಾಟ್ ಖರೀದಿಸಿ ತಾಯಿ ಜೊತೆಗೆ ನೆಲೆಸಿದ್ದರು.