
ಮೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಎರಡು ದಿನ ಆನ್‌ಲೈನ್ ಸೇವೆ ಅಲಭ್ಯ
Wednesday, July 23, 2025
ಮ೦ಗಳೂರು: ಮಾಹಿತಿ ತಂತ್ರಜ್ಞಾನ ಉನ್ನತೀಕರಣ ಪ್ರಯುಕ್ತ ಮೆಸ್ಕಾಂ ವ್ಯಾಪ್ತಿಯ ನಗರ ಪ್ರದೇಶದಲ್ಲಿ ಜು.25 ರಂದು ರಾತ್ರಿ 8.30 ರಿಂದ ಜು.27ರ ರಾತ್ರಿ 10 ಗಂಟೆಯವರೆಗೆ ಆನ್‌ಲೈನ್ ಸೇವೆ ಲಭ್ಯವಿರುವುದಿಲ್ಲ.
ಜು.25ರ ರಾತ್ರಿ 8.30 ಗಂಟೆಯಿಂದ ಜು.27 ರ ರಾತ್ರಿ 10 ಗಂಟೆಯವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಹಾಗಾಗಿ ಈ ಅವಧಿಯಲ್ಲಿ ಮೆಸ್ಕಾಂ ಆನ್‌ಲೈನ್ ಸೇವೆಗಳಾದ ವಿದ್ಯುತ್ ಬಿಲ್ಲುಗಳ ಪಾವತಿ, ಹೊಸ ಸಂಪರ್ಕ ಸೇವೆಗಳು, ಹೆಸರು ಮತ್ತು ಜಕಾತಿ ಬದಲಾವಣೆ ಇತ್ಯಾದಿ ಆನ್‌ಲೈನ್ ಆಧಾರಿತ ಸೇವೆಗಳು ಮೆಸ್ಕಾಂ ವ್ಯಾಪ್ತಿಯ ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ಆರ್‌ಎಪಿಡಿಆರ್‌ಪಿ ನಗರ ಪ್ರದೇಶಗಳ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.