
ಜು.13 ರಂದು ಆಳ್ವಾಸ್ ಪುನರ್ಜನ್ಮ ಕೇಂದ್ರ ಉದ್ಘಾಟನೆ
Friday, July 11, 2025
ಮೂಡುಬಿದಿರೆ: ಮನೋ ವೈದ್ಯಕೀಯ ಚಿಕಿತ್ಸೆಯನ್ನೊಳಗೊಂಡ ಆಳ್ವಾಸ್ ಪುನರ್ಜನ್ಮ ಕೇಂದ್ರವನ್ನು ಮಿಜಾರಿನಲ್ಲಿರುವ ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ಜುಲೈ 13ರಂದು ಉದ್ಘಾಟಿಸಲಾಗುವುದು.
ಉಡುಪಿ ಡಾ.ಎ.ವಿ ಬಾಳಗ ಮೆಮೊರಿಯಲ್ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಡಾ. ಪಿ.ವಿ. ಭಂಡಾರಿ ಕೇಂದ್ರವನ್ನು ಉದ್ಘಾಟಿಸಲಿರುವರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಲಿದ್ದು, ಮಂಗಳೂರಿನ ಫಿಸಿಯೋಥೆರಪಿಸ್ಟ್ ಡಾ. ಕರೊಲಿನ್ ಡಿಸೋಜ, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಅತಿಥಿಗಳಾಗಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.