
ಮುನಿ, ಭಟ್ಟಾರಕ ಸ್ವಾಮೀಜಿ ಚಾರ್ತುಮಾಸ: ಗುರುಪೂಜೆ-ತಾಳಮದ್ದಳೆ
Friday, July 11, 2025
ಮೂಡುಬಿದಿರೆ: ಆಚಾರ್ಯ ಗುಲಾಬ್ ಭೂಷಣ ಮುನಿ ಮಹಾರಾಜ್ ಹಾಗೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಚಾತುರ್ಮಾಸ ಆಚರಿಸುತ್ತಿದ್ದು, ಈ ಪ್ರಯುಕ್ತ ಗುರು ಪೌರ್ಣಮಿಯಂದು ಗುರುಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಜೈನಮಠ ಹಾಗೂ ಶಾಂತಿಭವನದಲ್ಲಿ ಲಘು ಸಿದ್ದ ಚಕ್ರವಿಧಾನ, ಪೂಜೆ ನೆರವೇರಿತು. ಬಳಿಕ ಆಶೀರ್ವಚನ ನೀಡಿದ ಮುನಿ,
ಗುರುಗಳು ಶ್ರೇಷ್ಠ ತಪಸ್ಸು, ಜ್ಞಾನದ ಮೂಲಕ ನಮ್ಮನ್ನು ಸಂಸ್ಕಾರವಂತರಾಗಿ ರೂಪಿಸುವರು ಎಂದರು.
ಪ್ರಮುಖರಾದ ಆದರ್ಶ್ ಮೂಡುಬಿದಿರೆ, ರಾಜವರ್ಮ ಬೈಲಂಗಡಿ, ಪ್ರತಾಪ್ ಚಂದ್ರ, ಅಜಿತ್, ಸ್ವರ್ಣಲತಾ, ಡಾ.ಅನ್ವಿತಾ ಕುಪ್ಪೆಪದವು, ಮಕರಂದ ಪಡಿವಾಳ್, ತಿಲಕ್ ಪ್ರಸಾದ್ ಸುಜಾತಾ ಬಕ್ಕಾರು, ಸ್ವಯಂ ಪ್ರಭ ಬಲ್ಲಾಳ್, ಸಂಪತ್, ಕೇಸರಿ ರವಿರಾಜ್, ಇಂದು ಆಚಾರ್ಯ ಮತ್ತಿತರರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಸಹಕಾರದಲ್ಲಿ ಅಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ತಂಡದಿಂದ, ವಿನಾಯಕ ಭಟ್ ಗಾಳಿಮನೆ ಆಯೋಜನೆಯಲ್ಲಿ ಪಾಕ್ಷಿಕ ತಾಳಮದ್ದಳೆ ಸರಣಿ ವಿಶ್ವಾವಸು ನಡೆಯಿತು.