ಇರುವೈಲ್ ನಲ್ಲಿ ಕೋಳಿ ಅಂಕ: ಪೊಲೀಸರಿಂದ ದಾಳಿ, 5 ಮಂದಿ ವಶಕ್ಕೆ

ಇರುವೈಲ್ ನಲ್ಲಿ ಕೋಳಿ ಅಂಕ: ಪೊಲೀಸರಿಂದ ದಾಳಿ, 5 ಮಂದಿ ವಶಕ್ಕೆ


ಮೂಡುಬಿದಿರೆ: ತಾಲೂಕಿನ ಇರುವೈಲು ಗ್ರಾಮದ ಸುಣ್ಣೋಣಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ಅವರ ನೇತೃತ್ವದ ತಂಡವು ಗುರುವಾರ ದಾಳಿ ನಡೆಸಿ ಐದು ಮಂದಿಯ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ.

ಸಂತೋಷ್ ನಾಯ್ಕ ಯಾನೆ ಅಟ್ಟೆ ಸಂತು, ವೇದವ್, ಸಂತೋಷ್ ಯಾನೆ ಚಿಮಣಿ ಸಂತು, ಕಿಶೋರ್ ಮತ್ತು ಪೂವಪ್ಪ ಪೂಜಾರಿ ಎಂಬವರು ಬಂಧಿತರು.

ಮಿಥುನ್ ಕುತ್ಯಾಡಿ, ಮಹಾಬಲ ಪೂಜಾರಿ, ವಿಷ್ಣು ಪೂಪಾಡಿ, ಜಗ್ಗು ಕರ್ಪೆ ಯಾನೆ ಜಗದೀಶ್, ಗುಮ್ಮಣ್ಣ, ಮನೋಜ್ ಕುಮಾರ್, ಹರೀಶ್ ಎಂಬವರು ಓಡಿ ತಪ್ಪಿಸಿಕೊಂಡಿದ್ದಾರೆ.

ಕೋಳಿ ಅಂಕಕ್ಕೆ ಬಳಸಿದ್ದ 4 ಹುಂಜಗಳನ್ನು ಮತ್ತು 1 ಸಾವಿರ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ. 

ಸದ್ರಿ ಪ್ರಕರಣದ ಆಪಾಧಿತ ಸಂತೋಷ@ ಅಟ್ಟೆ ಸಂತು ಎಂಬುವನು ವಿರುದ್ಧ ಈ ಹಿಂದೆ ನಾಲ್ಕು ಕೋಳಿ ಅಂಕದ ಪ್ರಕರಣ ದಾಖಲಾಗಿದ್ದು ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ: 112(ಸಂಘಟಿತ ಅಪರಾಧ) ರಂತೆ ಕ್ರಮ ಜರುಗಿಸಲಿದ್ದಾರೆ.

ಪೊಲೀಸ್ ಆಯುಕ್ತ ಸುಧೀರ ಕುಮಾರ್ ರೆಡ್ಡಿ  ಅವರ ಆದೇಶದಂತೆ  ಉಪ ಪೊಲೀಸ್ ಆಯುಕ್ತ  ಮಿಥುನ್ ಹೆಚ್.ಎನ್ ಐ.ಪಿ.ಎಸ್ (ಕಾ ಮತ್ತು ಸು) ಮತ್ತು  ರವಿಶಂಕರ (ಅ ಮತ್ತು ಸ) ಅವರ ಹಾಗೂ ಉತ್ತರ ಉಪವಿಭಾಗದ  ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಮೂಡುಬಿದಿರೆ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ಮತ್ತು ಸಿಬ್ಬಂದಿಗಳಾದ ರಾಜೇಶ, ಪ್ರದೀಪ, ಸುರೇಶ, ವೆಂಕಟೇಶ, ಚಂದ್ರಶೇಖರ ಉಮೇಶ ಅವರು ಭಾಗವಹಿಸಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article