ಪಾಡ್ಯಾರು ಶಾಲೆಯಲ್ಲಿ ಪೋಷಣ್ ಅಭಿಯಾನ್, ಆಟಿಡೊಂಜಿ ಕೂಟ, ಮಾದಕ ವ್ಯಸನದ ಬಗ್ಗೆ ಮಾಹಿತಿ

ಪಾಡ್ಯಾರು ಶಾಲೆಯಲ್ಲಿ ಪೋಷಣ್ ಅಭಿಯಾನ್, ಆಟಿಡೊಂಜಿ ಕೂಟ, ಮಾದಕ ವ್ಯಸನದ ಬಗ್ಗೆ ಮಾಹಿತಿ


ಮೂಡುಬಿದಿರೆ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ ಮಾದಕ ದ್ರವ್ಯ ವ್ಯಸನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸ್ ಉಪ ನಿರೀಕ್ಷಕಿ ಪ್ರತಿಭಾ ಅವರು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಬಗ್ಗೆ , ಪೋಕ್ಸೋ ಕಾಯ್ದೆಯ ಬಗ್ಗೆ, ವಾಹನಗಳಲ್ಲಿ ಹೋಗುವಾಗ ವಹಿಸಬೇಕಾದ ಜವಾಬ್ದಾರಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಪೋಷಣ್ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಇದೇ ಸಂದಭ೯ದಲ್ಲಿ ವಿದ್ಯಾರ್ಥಿಗಳಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನಿವೃತ್ತ ಬ್ಯಾಂಕ್ ಸಿಬ್ಬಂದಿ ಶೀನ ಎಂ ಇವರು ಭಾಗವಹಿಸಿ ಆಷಾಡ ಮಾಸದ ಆಚರಣೆಯ ಬಗ್ಗೆ ಮತ್ತು ಶಾಲೆಯಲ್ಲಿ ನೀಡುತ್ತಿರುವ ಆಹಾರದಲ್ಲಿನ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಕಾನ್ಸ್ಟೇಬಲ್ ವೆಂಕಟೇಶ್, ಗೌರವ ಶಿಕ್ಷಕಿ ಪ್ರತಿಭಾ ಅಕ್ಷರ ದಾಸೋಹ ಸಿಬ್ಬಂದಿ ಕಸ್ತೂರಿ ಅಂಚನ್ ಉಪಸ್ಥಿತರಿದ್ದರು.   ಮುಖ್ಯೋಪಾಧ್ಯಾಯ ಪ್ರಸನ್ನ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು.

ವಿದ್ಯಾರ್ಥಿಗಳು ಆಷಾಡ ಮಾಸದ ವಿವಿಧ ತಿನಿಸುಗಳನ್ನು ಮಾಡಿದ್ದು ಚಗಟೆ ಸೊಪ್ಪಿನ ಪಲ್ಯ, ಹಲಸಿನ ಬೀಜದ ಪಲ್ಯ, ಉಪ್ಪಿಗೆ ಹಾಕಿದ ಹಲಸಿನ ಪಲ್ಯ, ಒಂದೆಲಗ ಸೊಪ್ಪಿನ ಚಟ್ನಿ, ಪತ್ರೊಡೆ, ಚಗಟೆ ಸೊಪ್ಪಿನ ದೋಸೆ, ಪುಂಡಿ ಗಸಿ, ಅರಸಿನ ಎಲೆಯ , ಬೆಂಡೆಕಾಯಿ ಹುಳಿ ಮುಂಚಿ, ಉಪ್ಪಿನಕಾಯಿ, ಸೇಮಿಗೆ ಕಾಯಿ ಹಾಲು ಮತ್ತು ಪಾಯಸ ಸವಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article