
ಹಿರಿಯ ಜಾನಪದ ಕಲಾವಿದ ಸೇಸಪ್ಪ ಪಾಂಡ್ರು ನಿಧನ
Sunday, July 6, 2025
ಮೂಡುಬಿದಿರೆ: ರಾಷ್ಟ್ರಪತಿ ಅವರಿಂದ ಸನ್ಮಾನಗೊಂಡಿರುವ ಹಿರಿಯ ಜಾನಪದ ಕಲಾವಿದ, ನೆಲ್ಲಿಕಾರು ಗ್ರಾ. ಪಂಚಾಯತ್ ನ ಮಾಜಿ ಸದಸ್ಯ ಸೇಸಪ್ಪ ಪಾಂಡ್ರು ಅವರು ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು.
ಚಿತ್ರದುರ್ಗದ ತೋವಿನಕೆರೆ ನಾಟಕ ಮಂಡಳಿಯಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸಿರುವ ಅವರು ಮಾಯಿ ಪುರುಷ ಕಲಾವಿದರಾಗಿ ತನ್ನದೇ ಆದ ತಂಡವನ್ನು ಕಟ್ಟಿಕೊಂಡು ಧರ್ಮಸ್ಥಳ ಕೃಷಿಮೇಳ,ಕನ್ನಡ ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧೆಡೆ ಕಲಾಸೇವೆ ಮಾಡಿದ್ದಾರೆ.ಯಕ್ಷಗಾನ ಕಲಾವಿದರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಜನಪದ ಕ್ಷೇತ್ರದ ಸಾಧನೆಗಾಗಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ರಾಷ್ಟ್ರಪತಿ ಅವರಿಂದ ಸನ್ಮಾನಗೊಂಡಿದ್ದರು. ಅಳಿಯೂರು ಪಾಣರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.