ಗಾಯನದಲ್ಲಿ ವಿಶ್ವದಾಖಲೆ-ಯಶವಂತ್ ಅವರನ್ನು ಅಭಿನಂದಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಗಾಯನದಲ್ಲಿ ವಿಶ್ವದಾಖಲೆ-ಯಶವಂತ್ ಅವರನ್ನು ಅಭಿನಂದಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ


ಮೂಡುಬಿದಿರೆ: ಗಾನ ಗಂಧರ್ವ ದೇಶದ ಖ್ಯಾತ ಗಾಯಕ ದಿ.ಎಸ್.ಪಿ. ಬಾಲಸುಬ್ರಮಣ್ಯಂ ಅವರ 270ಕ್ಕೂ ಅಧಿಕ ಹಾಡುಗಳನ್ನು 24 ಗಂಟೆಗಳ ಕಾಲ ನಿರರ್ಗಳವಾಗಿ ಹಾಡುವ ಮೂಲಕ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದ ಝೀ ಕನ್ನಡ ಸರಿಗಮಪ ಖ್ಯಾತಿಯ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ವಿದ್ವಾನ್ ಯಶವಂತ್ ಎಂ.ಜಿ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಅಭಿನಂದಿಸಿದರು.


ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನವಾದ ಜೂನ್ 04 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ವಿಶ್ವದಾಖಲೆ ಕಾರ್ಯಕ್ರಮ ನಡೆದಿದ್ದು "ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌" ಇದರ ಏಷಿಯಾ ಅಧಿಕಾರಿಗಳಿಂದ ಈ ದಾಖಲೆಯನ್ನು ಹಸ್ತಾಂತರಿಸಲಾಯಿತು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಕಛೇರಿಯಲ್ಲಿ ಸನ್ಮಾನಿಸಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಸಂದೇಶ ಕಳಿಸಿದ್ದು

ಅವರು ಜೂನ್ 30ರಂದು  ಜೋಶಿ ಅವರು ಹುಬ್ಬಳ್ಳಿಯ ತಮ್ಮ ಕಚೇರಿಗೆ ಬರಮಾಡಿಕೊಂಡು ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ವೀಕ್ಷಿಸಿ ಅಭಿನಂದಿಸಿ ಶುಭಾಶಯಗಳು ಸಲ್ಲಿಸಿದರು. ಈ ಸಂದರ್ಭದಲ್ಲಿ ಯಶವಂತ್ ಎಂಜಿ ಕುಟುಂಬಸ್ಥರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಟದ ಸದಸ್ಯ ಸುನಿಲ್ ಪಣಪಿಲ ಜೊತೆಗಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article