ಮೂಡುಬಿದಿರೆ ಜೈನ್ ಮಿಲನ್ ಪದ ಸ್ವೀಕಾರ

ಮೂಡುಬಿದಿರೆ ಜೈನ್ ಮಿಲನ್ ಪದ ಸ್ವೀಕಾರ


ಮೂಡುಬಿದಿರೆ: ಭಾರತೀಯ ಜೈನ್ ಮಿಲನ್ ಮೂಡುಬಿದಿರೆ ವಲಯದ 2025-27ನೇ ಸಾಲಿನ ಪದ ಸ್ವೀಕಾರ ಸಮಾರಂಭವು ಭಾನುವಾರ ಮಹಾವೀರ ಭವನದಲ್ಲಿ ಜರಗಿತು. 

ನೂತನ ಅಧ್ಯಕ್ಷರಾಗಿ ಮಹೇಂದ್ರ ಕುಮಾ‌ರ್ ಜೈನ್, ಕಾರ್ಯದರ್ಶಿಯಾಗಿ ಶಶಿಕಾಂತ್ ಎ, ಕೋಶಾಧಿಕಾರಿಯಾಗಿ ಶ್ರೇಯಾಂಸ ಹೆಗ್ಡೆ, ಅಧಿಕಾರವನ್ನು ವಹಿಸಿಕೊಂಡರು.


ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತರಿದ್ದ ಆಚಾರ್ಯ ಗುಲಾಬ್ ಭೂಷಣ್ ಜಿ ಮಹಾರಾಜ್ ಅವರು ಆಶೀವ೯ಚನ ನೀಡಿ ಜೈನರು, ಬದುಕು ಬದುಕಲು ಬಿಡು ಎನ್ನುವ ಧೈಯವನ್ನು ಪಾಲಿಸಬೇಕು. ಶಾಂತಿ ಸುಖವನ್ನು ನೀಡುವ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಂಡು ಆಚಾರ್ಯರುಗಳ, ಗುರುಗಳ ಆಶೀರ್ವಾದವನ್ನು ಸದಾ ಪಡೆದುಕೊಳ್ಳಬೇಕು ಎಂದು ಕರೆ ಕೊಟ್ಟರು. 

ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಧರ್ಮದ ಬಗ್ಗೆ ವಾರ್ತೆಯನ್ನು ಕೇಳಿ ಜೈನ ಬಂಧುಗಳು ಸದುಪಯೋಗದ ಉತ್ತಮ ಕೆಲಸಗಳನ್ನು ಮಾಡಿ ಸಂಘಟನೆಯನ್ನು ಬಲಪಡಿಸಬೇಕು. ಅಸಹನೆಗೆ ಅವಕಾಶವನ್ನು ನೀಡದೆ ಆಚಾರ್ಯರಿಗೆ ಪೂಜ್ಯತೆಯಿಂದ ಒಗ್ಗಟ್ಟನ್ನು ತೋರಿಸಿಕೊಡಬೇಕಾಗಿದೆ ಎಂದು ಕೇಳಿಕೊಂಡರು.

ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಜೈನ ಪರಂಪರೆಯನ್ನು ಯುವಕರಿಗೆ ತಿಳಿಸಿ ಕೊಡುವುದರೊಂದಿಗೆ ಮಕ್ಕಳನ್ನು, ಯುವಕರನ್ನು ಒಟ್ಟುಗೂಡಿಸಿ ಯುವ ಜೈನ್ ಸಂಘಟನೆ ರಚಿಸಬೇಕಾದ ಅಗತ್ಯವಿದೆ ಎಂದರು.

ಮಾಜಿ ಸಚಿವ ಕೆ.ಅಭಯ ಚಂದ್ರ ಮಂಜುಳಾ ಜೈನ್ ದಂಪತಿಯನ್ನು ಸನ್ಮಾನಿಸಲಾಯಿತು ಉಜಿರೆಯ ಸೋನಿಯಾ ವರ್ಮ ಅವರನ್ನು ಗೌರವಿಸಲಾಯಿತು.

17 ಮಂದಿ ನೂತನ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. 

ವಲಯ ನಿರ್ದೇಶಕ ಜಯರಾಜ ಕಂಬಳಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.

ಪ್ರಭಾತ್ ಕುಮಾರ್ ಬಲ್ನಾಡ್ ಅಧ್ಯಕ್ಷತೆ ವಹಿಸಿದ್ದರು. ನೂತನ ಅಧ್ಯಕ್ಷ ಮಹೇಂದ್ರ ಕುಮಾ‌ರ್ ಜೈನ್ ತಮ್ಮ ಎರಡು ವರ್ಷದ ಕಾಲಾವಧಿಯ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಿದ್ದರು.

ವೇದಿಕೆಯಲ್ಲಿ ಶ್ವೇತಾ ಜೈನ್, ವಲಯ ಉಪಾಧ್ಯಕ್ಷ ಸುದರ್ಶನ್ ಜೈನ್ ಉಪಸ್ಥಿತರಿದ್ದರು. ಆಸ್ಪತ್ರೆಯಲ್ಲಿರುವ ಜೈನ್ ಮಿಲನ್ ನ ಅಧ್ಯಕ್ಷ ಅನಡ್ಕ ದಿನೇಶ್ ಕುಮಾರ್ ಅವರ ಆರೋಗ್ಯ ಸುಧಾರಿಸಲು ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಲಾಯಿತು.

ಅನಂತವೀರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ರಾಜೇಶ್ ಕುಮಾರ್ ವರದಿ ವಾಚಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಜೈನ್ ಲೆಕ್ಕಪತ್ರ ಮಂಡಿಸಿದರು.  ನಿತೀಶ್ ಕುಮಾರ್ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು. ನೂತನ ಕಾರ್ಯದರ್ಶಿ ಶಶಿಕಾಂತ್ ಜೈನ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article