
ಪಣಪಿಲದ ರಾಜೇಶ್ ಕೋಟ್ಯಾನ್‌ಗೆ ‘ಪ್ರಗತಿಪರ ಮೀನು ಕೃಷಿಕ’ ಪ್ರಶಸ್ತಿ
Sunday, July 27, 2025
ಮೂಡುಬಿದಿರೆ: ಪಣಪಿಲದ ಮೀನು ಕೃಷಿಕ, ರಾಜ್ ಮತ್ಸ್ಯ ಕೇಂದ್ರದ ಮುಖ್ಯಸ್ಥ ರಾಜೇಶ್ ಕೋಟ್ಯಾನ್ ಅವರಿಗೆ ‘ಪ್ರಗತಿಪರ ಮೀನು ಕೃಷಿಕ’ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿ.ವಿ, ಬೀದರ, ಜಲಕೃಷಿ ವಿಭಾಗ, ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಇದರ ವತಿಯಿಂದ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ದ.ಕ. ಜಿಲ್ಲೆಯಿಂದ ರಾಜೇಶ್ ಕೋಟ್ಯಾನ್ ಒಬ್ಬರೇ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಕಳೆದ ಹಲವು ವರ್ಷಗಳಿಂದ ಮೀನು ಕೃಷಿಯಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದವರಾಗಿದ್ದಾರೆ.