ವಿದೇಶದಲ್ಲಿ ಅಪ್ರಾಪ್ತೆಯ ಅತ್ಯಾಚಾರ: ಯೂಟ್ಯೂಬರ್ ಶಾಲೂ ಕಿಂಗ್ ಬಂಧನ

ವಿದೇಶದಲ್ಲಿ ಅಪ್ರಾಪ್ತೆಯ ಅತ್ಯಾಚಾರ: ಯೂಟ್ಯೂಬರ್ ಶಾಲೂ ಕಿಂಗ್ ಬಂಧನ


ಮಂಗಳೂರು: ವಿವಾಹದ ಆಮಿಷವೊಡ್ಡಿ ವಿದೇಶದಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಆರೋಪಿ ಯೂಟ್ಯೂಬರ್ ಶಾಲು ಕಿಂಗ್ ಅಲಿಯಾಸ್ ಮುಹಮ್ಮದ್ ಸಾಲಿಯನ್ನು ಕೇರಳದ ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕೇರಳದ ಕೊಯಿಲಾಂಡಿ ಮೂಲದ ಅಪ್ರಾಪ್ತೆ ನೀಡಿರುವ ದೂರಿನನ್ವಯ ಕೊಯಿಲಾಂಡಿ ಪೊಕ್ಸೊ ಪ್ರಕರಣ ದಾಖಲಿಸಲಿಸಿದ್ದರು. ಬಳಿಕ ಆರೋಪಿ ಶಾಲೂ ಕಿಂಗ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಶನಿವಾರ ಆತ ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಕೇರಳದ ಕೊಯಿಲಾಂಡಿ ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ವಿವಾಹಿತನಾದ ಈತನಿಗೆ ಮೂವರು ಮಕ್ಕಳಿದ್ದಾರೆ. ಅಪ್ರಾಪ್ತೆಯು ಈತನಿಗೆ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಆಪ್ತೆಯಾಗಿದ್ದಳು. ಬಳಿಕ ಈತ ಆಕೆಯನ್ನು ಪುಸಲಾಯಿಸಿ, ಮದುವೆಯ ಭರವಸೆಯ ನೀಡಿ ವಿದೇಶದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮುಹಮ್ಮದ್ ಸಾಲಿಯು ಶಾಲು ಕಿಂಗ್ಸ್ ಮೀಡಿಯಾ ಮತ್ತು ಶಾಲು ಕಿಂಗ್ಸ್ ಬ್ಲಾಗ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿದ್ದ. ಕಾಸರಗೋಡಿನ ಬ್ಯಾರಿ ಮಿಶ್ರಿತ ಮಲಯಾಳಂ ಭಾಷೆಯಲ್ಲಿದ್ದ ಈತನ ವೀಡಿಯೊ ಕಂಟೆಂಟ್‌ಗಳು ಬಹಳಷ್ಟು ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಈತ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿ ಶೈಕ್ಷಣಿಕ ಸಂಸ್ಥೆಗಳು, ವ್ಯಾಪಾರ, ಉದ್ಯಮ ಮಳಿಗೆಗಳನ್ನು ಪ್ರೊಮೋಟ್ ಮಾಡುವ ವೀಡಿಯೊ ಮಾಡುತ್ತಿದ್ದ. ಇತೀಚೆಗೆ ಮಂಗಳೂರಿಗೂ ಆತ ಬಂದು ವ್ಯಾಪಾರ ಮಳಿಗೆಯೊಂದರ ಪ್ರೊಮೋಷನ್ ಮಾಡಿದ್ದ ಎಂದು ತಿಳಿದು ಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article