
ಉಷಾ ಡಿ.ಪೈಗೆ ಕೆಎಂಎಫ್ ಅತ್ಯುತ್ತಮ ಡೀಲರ್ ಗೌರವ
Sunday, July 27, 2025
ಮೂಡುಬಿದಿರೆ: ಇಲ್ಲಿನ ನಂದಿನಿ ಅಧಿಕೃತ ಡೀಲರ್ ಉಷಾ ಡಿ.ಪೈ ಅವರನ್ನು 2024-25ನೇ ಸಾಲಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಮಂಗಳೂರು ನಗರ ಪ್ರದೇಶದ ಅತ್ಯುತ್ತಮ ಡೀಲರ್ ಆಗಿ ಗುರುತಿಸಿ ದ್ವಿತೀಯ ಸ್ಥಾನ ನೀಡಿ ಗೌರವಿಸಲಾಯಿತು.
ದ.ಕ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ನಿರ್ದೇಶಕರಾದ ನಂದರಾಮ ರೈ, ಕೆ.ಪಿ ಸುಚರಿತ ಶೆಟ್ಟಿ, ಎಂ.ಡಿ ವಿವೇಕ್, ಪಡುಮಾರ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ದಯಾನಂದ ಪೈ ಇದ್ದರು.