
ಬಡ ವಿದ್ಯಾಥಿ೯ನಿಯ ಉನ್ನತ ಶಿಕ್ಷಣಕ್ಕೆ ಸಾಯೀ ಮಾನಾ೯ಡ್ ಆಥಿ೯ಕ ನೆರವು
Monday, July 28, 2025
ಮೂಡುಬಿದಿರೆ: ಸಾಯೀ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.) ಅಮನಬೆಟ್ಟು, ಪಡುಮಾರ್ನಾಡ್ ಇದರ ಸೇವಾ ಸಂಘದ 72ನೇ ಯೋಜನೆಯ ಜುಲೈ ತಿಂಗಳ 3ನೇ ಯೋಜನೆಯನ್ನು ಬಡ ವಿದ್ಯಾಥಿ೯ನಿಯ ಉನ್ನತ ಶಿಕ್ಷಣ ಕ್ಕಾಗಿ ಆಥಿ೯ಕ ನೆರವು ನೀಡಲಾಯಿತು.
ಪುತ್ತಿಗೆ ಗ್ರಾಮದ ಸಂಪಿಗೆ ಪರಿಸರದ ಕೊಡಿಪಾಡಿ ಮನೆ ಯ ಅನ್ವಿತಾ ಆಚಾರ್ಯ ಎಂಬವರು ತಂದೆ ತಾಯಿಯನ್ನು ಕಳೆದುಕೊಂಡು ಮಾವನ ಆಶ್ರಯದಲ್ಲಿದ್ದಾರೆ.
ಜೈನ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯನ್ನು ಮುಗಿಸಿದ್ದು 560 ಅಂಕಗಳನ್ನು ಗಳಿಸಿಕೊಂಡಿದ್ದಾರೆ. ಮುಂದೆ ಎಂಜಿನಿಯರಿಂಗ್ ಪದವಿಯನ್ನು ಪಡೆಯಬೇಕೆಂದುಕೊಂಡಿದ್ದು ಆದರೆ ಇದಕ್ಕೆ ಆಥಿ೯ಕ ತೊಂದರೆಯುಂಟಾಗಿದೆ ಇದನ್ನು ಅರಿತ ಸೇವಾ ಸಂಘವು ರೂ. 10000ದ ಚೆಕ್ಕನ್ನು ಭಾನುವಾರ ಹಸ್ತಾಂತರಿಸುವ ಮೂಲಕ ಮುಂದಿನ ಶಿಕ್ಷಣಕ್ಕೆ ಸಹಕಾರ ನೀಡಿದೆ.