
ಲಯನ್ಸ್ ಕ್ಲಬ್ ನಿಂದ ಕಾರ್ಗಿಲ್ ದಿನ ಆಚರಣೆ: ನಿವೃತ್ತ ಯೋಧಗೆ ಸನ್ಮಾನ
Monday, July 28, 2025
ಮೂಡುಬಿದಿರೆ: ಕಾರ್ಗಿಲ್ ದಿನಾಚರಣೆಯ ಅಂಗವಾಗಿ ನಿವೃತ್ತ ಯೋದ ಸದಾಶಿವ ಶೆಟ್ಟಿ ಅವರನ್ನು ಕೀತಿ೯ನಗರದಲ್ಲಿರುವ ಲಯನ್ಸ್ ಪಾರ್ಕ್ ಹರಿಭವ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಲಯನ್ಸ್ ಅಧ್ಯಕ್ಷ ಲ.ಶಿವಪ್ರಸಾದ್ ಹೆಗ್ಡೆ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಲಯಾಧ್ಯಕ್ಷ ಲ.ಜೋಸ್ಸಿ ಮೆನೇಜಸ್, ಪೂರ್ವಾಧ್ಯಕ್ಷ ಬೋನವೆಂಚರ್ ಮೆನೇಜಸ್, ಕಾರ್ಯದರ್ಶಿ ಓಸ್ವಾಲ್ಡ್ ಡಿಕೋಸ್ಟ, ಕೋಶಾಧಿಕಾರಿ ಹರೀಶ್ ತಂತ್ರಿ, ಹಾಗೂ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಪತ್ರವನ್ನು ನವಾನಂದ ಅವರು ವಾಚಿಸಿದರು. ಲ.ಶಿವಪ್ರಸಾದ್ ಹೆಗ್ಡೆ ಕಾಯ೯ಕ್ರಮ ನಿರ್ವಹಿಸಿದರು. ಓಸ್ವಾಲ್ಡ್ ಅವರು ಧನ್ಯವಾದಗೈದರು.