ಕರಿಯನಂಗಡಿ ಜ್ಞಾನ ವಿಕಾಸ ಕೇಂದ್ರದಿಂದ "ಪೌಷ್ಟಿಕ ಆಹಾರ ಅರಿವು" ಕಾಯ೯ಕ್ರಮ

ಕರಿಯನಂಗಡಿ ಜ್ಞಾನ ವಿಕಾಸ ಕೇಂದ್ರದಿಂದ "ಪೌಷ್ಟಿಕ ಆಹಾರ ಅರಿವು" ಕಾಯ೯ಕ್ರಮ


ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಮೂಡುಬಿದಿರೆ ತಾಲೂಕಿನ ಕರಿಯನಂಗಡಿ ಕಾರ್ಯ ಕ್ಷೇತ್ರ ದ ಸಿಂಚನ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ ಭಾನುವಾರ ನಡೆಯಿತು.

ಎಸ್ ಡಿಎಂಸಿ ಅಧ್ಯಕ್ಷ ಗಣಪತಿ ಪೈ ಅವರು  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 


ಬೆಳುವಾಯಿ ಪ್ರಾಥಮಿಕ ಆರೋಗ್ಯ ಕೇಂದ್ರ ದ ಆರೋಗ್ಯ ಅಧಿಕಾರಿ  ಸಂತೋಷ್ ಅವರು ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿ, ಉತ್ತಮ ಆರೋಗ್ಯಕ್ಕೆ ಸಮಾತೋಲನ ಆಹಾರ ಎಷ್ಟು ಪ್ರಾಮುಖ್ಯತೆ ಎಂಬ ವಿಷಯ ದ ಬಗ್ಗೆ ಮಾಹಿತಿಯನ್ನು ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಬೆಳುವಾಯಿ ಸಿಎ ಬ್ಯಾಂಕ್ ನ ನಿರ್ದೇಶಕಿ ರಮಣಿ ಅಳ್ವಾ ಅವರು ಮಾತನಾಡಿ, ಡಿಗ್ರಿ ಪದವಿಗಿಂತ ಹೆಚ್ಚಿನ ಮಾಹಿತಿ, ಅನುಭವ ಜ್ಞಾನ ವಿಕಾಸ ಕೇಂದ್ರದಲ್ಲಿ ಸಿಗುತ್ತದೆ ಇದರ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕೆಂದರು. ತಾಲೂಕಿನ ಯೋಜನಾಧಿಕಾರಿ ಧನಂಜಯ್ ಅವರು ಮುಖ್ಯ ಅತಿಯಾಗಿ  ಭಾಗವಹಿಸಿ  ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಅನುಷ್ಠಾನ ಮಾಡುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಲಯದ ಅಧ್ಯಕ್ಷೆ ಬಬಿತ, ಕರಿಯನಂಗಡಿ ಒಕ್ಕೂಟದ  ಜೊತೆ  ಕಾರ್ಯ ದರ್ಶಿ  ಜಯಶ್ರೀ  ಭಾಗವಹಿಸಿದ್ದರು. 

ಕಾರ್ಯಕ್ರಮ ದಲ್ಲಿ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.  ಸೇವಾಪ್ರತಿನಿಧಿ   ವಿದ್ಯಾ ಸ್ವಾಗತಿಸಿದರು.  ಜ್ಞಾನ ವಿಕಾಸ ಸಮನ್ವಯಾಧಿಕಾರಿ  ವಿದ್ಯಾ, ಕಾರ್ಯಕ್ರಮ ನಿರೂಪಿಸಿದರು. ಭಾರತಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article