
ಮೂಡುಬಿದಿರೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಸಮಪ೯ಕ ಕಾಮಗಾರಿಗಳ ಬಗ್ಗೆ ಚಚೆ೯
ಮೂಡುಬಿದಿರೆ: ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಅಸಮರ್ಪಕ ಕಾಮಗಾರಿ ಹಾಗೂ ವಾಡ್ ೯ಗಳಲ್ಲಿನ ಸಮಸ್ಯೆಗಳ ಕುರಿತು ಚಚೆ೯ ನಡೆಸಿದರು.
ಪುರಸಭೆ ಅಧೀನದಲ್ಲಿರುವ ಮೂಡುಬಿದಿರೆ ಬಸ್ ನಿಲ್ದಾಣ ಹಾಗೂ ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿನ ಅವ್ಯವಸ್ಥೆಗಳ ಬಗ್ಗೆ ಸದಸ್ಯ ಸುರೇಶ್ ಕೋಟ್ಯಾನ್ ಮಾತನಾಡಿ, ಅಪೂರ್ಣ ಸ್ಥಿತಿಯಲ್ಲಿರುವ ಇಂದಿರಾಗಾಂಧಿ ಕಾಂಪ್ಲೆಕ್ಸ್ ನ ಮೇಲಂತಸ್ತಿನ ಕಾಮಗಾರಿಯಿಂದಾಗಿ ಅಲ್ಲಿ ಶೆಟರ್ ತೆರೆದಿರುವ ಕೋಣೆಗಳು ಗುಜರಿ ಶೇಖರಣೆಯ ಕೋಣೆಗಳಾಗುತ್ತಿವೆ. ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 20 ಕೊಠಡಿಗಳು ಕಳೆದ ಆರು ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇಂದಿರಾಗಾಂಧಿ ಕಾಂಪ್ಲೆಕ್ಸ್, ಸುಲಭ ಶೌಚಾಲಯದ ಆವರಣ ಅಶುಚಿತ್ವದಿಂದ ಕೂಡಿದೆ. ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆಯೂ ಹೆಚ್ಚಾಗುತ್ತಿದೆ. ಕಳೆದ ಐದು ವರ್ಷಗಳಿಂದ ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗುತ್ತಿದ್ದರೋ ಯಾವುದೇ ಸ್ಪಂದನೆ ಇಲ್ಲ ಎಂದು ಸದಸ್ಯೆ ಶ್ವೇತಾ ಪ್ರವೀಣ್ ಧ್ವನಿಗೂಡಿಸಿದರು. ಸ್ಥಳ ಪರಿಶೀಲನೆ ಮಾಡಿ ಶೀಘ್ರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮುಖ್ಯಾಧಿಕಾರಿ ಇಂದು ಎಂ. ಭರವಸೆ ನೀಡಿದರು.
ಸ್ಥಳ ಪರಿಶೀಲನೆ ಮಾಡಿ ಸುಮ್ಮನಿರುವುದಲ್ಲ. ಯಾವುದೆಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎನ್ನುವ ವಿಚಾರವನ್ನು ಫೋಟೋ ಸಹಿತ ಮುಂದಿನ ಸಭೆಯ ಗಮನಕ್ಕೆ ತರುವಂತೆ ಹಿರಿಯ ಸದಸ್ಯ ಪಿ.ಕೆ ಥೋಮಸ್ ಸಲಹೆ ನೀಡಿದರು.
ವಿದ್ಯಾಗಿರಿಯ ವಸತಿ ಸಮುಚ್ಛಯದ ಗಲೀಜು ನೀರನ್ನು ಸಾರ್ವಜನಿಕ ಸ್ಥಳಕ್ಕೆ ಬಿಡುವುದರಿಂದ ತೊಂದರೆಯಾಗುತ್ತದೆ ಎಂದು ದಿವ್ಯಾ ಜಗದೀಶ್ ಸಮಸ್ಯೆ ತೋಡಿಕೊಂಡರು. ಮೂಡುಬಿದಿರೆಯ ಹಲವು ವಸತಿ ಸಮುಚ್ಛಯಗಳಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡುವಂತೆ ಸದಸ್ಯರು ಸಲಹೆ ನೀಡಿದರು. ಎಲ್ಲಾ ವಸತಿ ಸಮುಚ್ಛಯಗಳಿಗೆ ಎಸ್‌ಟಿಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಸದಸ್ಯರು ಸಲಹೆ ನೀಡಿದರು.
ಜಲಜೀವನ್ ಮಿಷನ್‌ನ ಕಾಮಗಾರಿಯಲ್ಲಿ ನಿಯಮ ಪಾಲನೆಯಾಗುತ್ತಿಲ್ಲ. ಕೆಲವೆಡೆ ಕೇವಲ 9 ಇಂಚು ಆಳದಲ್ಲಿ ಪೈಪ್ ಅಳವಡಿಸಿದ್ದಾರೆ. ಇದನ್ನು ಪರಿಶೀಲಿಸುವವರು ಯಾರು? ಎಂದು ಸದಸ್ಯರು ಪ್ರಶ್ನಿಸಿದರು.ಸಂಬಂಧಪಟ್ಟ ಇಲಾಖೆಗೆ ಕಾಮಗಾರಿ ಸ್ಥಗಿತಗೊಳಿಸಲು ನೋಟೀಸ್ ನೀಡುವುದಾಗಿ ತಿಳಿಸಿದರು.
ಸಾರ್ವಜನಿಕರು ಓಡಾಡಲು ಭಯಪಡುವಂತಾಗಿದೆ. ಫಾಸ್ಟ್ ಫುಡ್ ನಿರುಪಯುಕ್ತ ಆಹಾರವನ್ನು ಬೀದಿನಾಯಿಗಳಿಗೆ ಎಸೆಯುವುದರಿಂದ ಸಮಸ್ಯೆಯಾಗುತ್ತಿದೆ ಎಂದು ರಾಜೇಶ್ ನಾಯ್ಕ್, ಕೊರಗಪ್ಪ ಮತ್ತಿತರರು ಸಭೆಯ ಗಮನಕ್ಕೆ ತಂದರು.
ಸ್ಥಾಯಿ ಸಮಿತಿಯ ಅಧ್ಯಕ್ಷೆ ಸ್ವಾತಿ ಪ್ರಭು, ಉಪಾಧ್ಯಕ್ಷ ನಾಗಾರಾಜ ಪೂಜಾರಿ, ಸದಸ್ಯರಾದ ಸುರೇಶ್ ಪ್ರಭು, ಪ್ರಸಾದ್ ಕುಮಾರ್, ರೂಪಾ ಸಂತೋಷ್ ಶೆಟ್ಟಿ, ಮಮತಾ ಆನಂದ್, ಪರಿಸರ ಅಭಿಯಂತರೆ ಶಿಲ್ಪಾ.ಎಸ್, ಕಂದಾಯ ಅಧಿಕಾರಿ ಜ್ಯೋತಿ ಎಸ್., ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಕಚೇರಿ ವ್ಯವಸ್ಥಾಪಕಿ ಯಶಸ್ವಿನಿ, ಜೂನಿಯರ್ ಇಂಜಿನಿಯರ್ ನಳಿನ್ ಕುಮಾರ್, ಪ್ರಥಮ ದರ್ಜೆ ಸಹಾಯಕಿ ಮೀನಾಕ್ಷಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.