
ಅ.ಕ. ಜನಜಾಗೃತಿ ಯೋಜನೆ ಪದಾಧಿಕಾರಿಗಳ ಸಭೆ
Monday, July 14, 2025
ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ಯೋಜನೆ ಮೂಡುಬಿದಿರೆ ಇದರ ಪದಾಧಿಕಾರಿಗಳ ಸಭೆಯು ಸೋಮವಾರ ಸಮಾಜ ಮಂದಿರದಲ್ಲಿ ನಡೆಯಿತು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಸ್ವಸಹಾಯ ಸಂಘದ ಸದಸ್ಯರ ತಿಳುವಳಿಕೆಯಿಂದ ಮದ್ಯಪಾನ, ಧೂಮಪಾನ ಗಳಂತಹ ದುಶ್ಚಟಗಳು ಹತೋಟಿಗೆ ಬಂದಿದೆ. ಸ್ವ ಇಚ್ಛೆಯಿಂದ ದುಶ್ಚಟ ಮುಕ್ತ ರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಷ್ ಚಂದ್ರ ಚೌಟ ಅವರು ಅಧ್ಯಕ್ಷತೆ ಯನ್ನು ವಹಿಸಿದ್ದರು. 2025-26ನೇ ಸಾಲಿನ ಕ್ರಿಯಾ ಯೋಜನೆಯ ಬಗ್ಗೆ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ಜನ ಜಾಗೃತಿಯ ಯೋಜನಾಧಿಕಾರಿ ಗಣೇಶ್ ಅವರು ಮಾಹಿತಿ ನೀಡಿ ಚರ್ಚಿಸಿದರು. ಗ್ರಾಮಾಭಿವೃದ್ಧಿ ಯೋಜನೆಯ ದ. ಕ 1 ಜಿಲ್ಲೆಯ ಜಿಲ್ಲಾ ನಿರ್ದೇಶಕ ದಿನೇಶ್ ಅವರು ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನ ಜಾಗೃತಿ ವೇದಿಕೆ ಒಟ್ಟಾಗಿ ಮಾಡುವ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚು ಅರ್ಥ ಪೂರ್ಣವಾಗಿ ಮಾಡಲು ಸಹಕಾರ ಕೇಳಿದರು. ತಾಲೂಕು ವೇದಿಕೆಯ ಕಾನೂನು ಸಲಹೆಗಾರರಾದ ಬಾಹುಬಲಿ ಪ್ರಸಾದ್ ಮಾತನಾಡಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರು, ವಲಯದ ಅಧ್ಯಕ್ಷರು ಕ್ರಿಯಾಯೋಜನೆಯ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಹಕಾರವನ್ನು ನೀಡುವಂತೆ ಕೇಳಿಕೊಂಡರು.
ಸಭೆಯಲ್ಲಿ 6 ವಲಯದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಧನಂಜಯ ಬಿ ಸ್ವಾಗತಿಸಿ ತಾಲೂಕಿನ ಸಾಧನಾ ವರದಿಯನ್ನು ಮಂಡಿಸಿದರು. ಜ್ಞಾನ ವಿಕಾಸ ಸಮನ್ವಧಿಕಾರಿ ವಿದ್ಯಾ ಕಾಯ೯ಕ್ರಮ ನಿರೂಪಿಸಿದರು.