ಕೋಟೆಕಾರು ಬ್ಯಾಂಕ್ ದರೋಡೆ; ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು, ದಾಖಲೆ ಪತ್ರಗಳ ಬಿಡುಗಡೆಗೆ ನ್ಯಾಯಾಲಯ ಆದೇಶ

ಕೋಟೆಕಾರು ಬ್ಯಾಂಕ್ ದರೋಡೆ; ಕೋಟ್ಯಂತರ ಮೌಲ್ಯದ ಚಿನ್ನಾಭರಣ, ನಗದು, ದಾಖಲೆ ಪತ್ರಗಳ ಬಿಡುಗಡೆಗೆ ನ್ಯಾಯಾಲಯ ಆದೇಶ

ಮೂಡುಬಿದಿರೆ: ಜನವರಿ ತಿಂಗಳಲ್ಲಿ ಭಾರೀ ಸುದ್ದಿಯಾಗಿದ್ದ ಉಳ್ಳಾಲ ಕೋಟೆಕಾರು ವ್ಯ.ಸೇ.ಸ. ಸಂಘದ ದರೋಡೆಗೆ  ಸಂಬಂಧಿಸಿ ಆರೋಪಗಳಿಂದ ವಶಪಡಿಸಿಕೊಳ್ಳಲಾಗಿದ್ದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣ, ನಗದು ಹಾಗೂ ದಾಖಲೆಪತ್ರಗಳನ್ನು ಬ್ಯಾಂಕ್ ಗೆ ನೀಡುವಂತೆ ಮಂಗಳೂರಿನ ಏಳನೇ ಜೆ.ಎಂ.ಎಫ್.ಸಿ. ನ್ಯಾಯಾಲಯವು ಆದೇಶಿಸಿದೆ.

2025 ಜನವರಿ 17 ರಂದು ಮಂಗಳೂರು ಉಳ್ಳಾಲ ಸಮೀಪದ ಕೋಟೆಕಾರು ವ್ಯ.ಸೇ.ಸ. ಸಂಘದಿಂದ ಗ್ರಾಹಕರಿಗೆ ಸಂಬಂಧಿಸಿದ 20 ಕೋಟಿ ರೂ. ಅಂದಾಜು ಮೌಲ್ಯದ ಸುಮಾರು 22 ಕೆ.ಜಿ.,  178 ಗ್ರಾಂ., 28 ಮಿಲಿ ಗ್ರಾಂ. ಚಿನ್ನಾಭರಣಗಳು, 11,67,044  ರೂ. ನಗದನ್ನು ಕಳ್ಳರು ದೋಚಿದ್ದರು.

ಈ ಪ್ರಕರಣವನ್ನು ಬೇಧಿಸಿದ ಉಳ್ಳಾಲ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಕಳವಾಗಿದ್ದ ಚಿನ್ನಾಭರಣಗಳು ಮತ್ತು ನಗದನ್ನು ವಶಪಡಿಸಿಕೊಂಡಿದ್ದರು.

ಈ ಬ್ಯಾಂಕ್ ನ ಗ್ರಾಹಕರಿಗೆ ಸಂಬಂಧಿಸಿದ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಬಿಡುಗಡೆ ಮಾಡಬೇಕೆಂದು ಬ್ಯಾಂಕ್ ನ ಪರವಾಗಿ ಮೂಡುಬಿದಿರೆಯ ಹಿರಿಯ ವಕೀಲರಾದ ನಾಗೇಶ್ ಶೆಟ್ಟಿ ಡಿ. ಹಾಗೂ ಅಶ್ವಿನಿ ಡಿಸೋಜ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ವಾದ ಮಂಡಿಸಿದ್ದರು.

ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಚಿನ್ನಾಭರಣಗಳು, ನಗದು ಮತ್ತು ದಾಖಲೆಪತ್ರಗಳನ್ನು ಬ್ಯಾಂಕ್ ಗೆ ಬಿಡುಗಡೆಗೊಳಿಸುವಂತೆ ಆದೇಶಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article