
ಬಾಬುರಾಜೇಂದ್ರ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ, ಪುಸ್ತಕ ವಿತರಣೆ
Saturday, July 5, 2025
ಮೂಡುಬಿದಿರೆ: ಮೂಡುಬಿದಿರೆ ಬಾಬು ರಾಜೇಂದ್ರಪ್ರಸಾದ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ, ಇನ್ನರ್‌ವ್ಹೀಲ್ ಕ್ಲಬ್ ಮೂಡುಬಿದಿರೆ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಪುಸ್ತಕ ವಿತರಣೆ ಕಾಯ೯ಕ್ರಮವು ಶನಿವಾರ ನಡೆಯಿತು.
ಶ್ರೀಮಹಾವೀರ ಕಾಲೇಜಿನ ಉಪನ್ಯಾಸಕಿ ಪೂರ್ಣಿಮಾ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಶಿಕ್ಷಣದಿಂದ ಆತ್ಮವಿಶ್ವಾಸ ಬರುತ್ತದೆ. ಶ್ರದ್ಧೆ, ಹಠ ಕಾರ್ಯತತ್ಪರತೆ, ಆತ್ಮವಿಶ್ವಾಸ ಇವು ನಾಯಕತ್ವ ವಹಿಸಿಕೊಳ್ಳುವವನಲ್ಲಿರಬೇಕಾದ ಗುಣಗಳು ಇದು ಶಿಕ್ಷಣದಿಂದ ಬರುತ್ತದೆ. ನಾಯಕತ್ವಕ್ಕೆ ರೂಪ, ವಂಶ ಪರಂಪರೆ, ಶ್ರೀಮಂತಿಕೆ, ಅತಿ ಬುದ್ದಿವಂತಿಕೆ ಯಾವುದೂ ಅಗತ್ಯವಿಲ್ಲ. ಉತ್ತಮ ನಾಯಕರನ್ನು ಆಯ್ಕೆ ಮಾಡಿದರೆ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ಹೇಳಿದರು.
ಇನ್ನರವ್ಹೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ಶ್ವೇತಾ ಜೈನ್ ಪುಸ್ತಕ ವಿತರಿಸಿದರು.
ಮಂಗಳೂರು ಮಹಾನಗರಪಾಲಿಕೆ ಮಾಜಿ ಮೇಯರ್ ಮನೋಜ್ ಅವರನ್ನು ಸನ್ಮಾನಿಸಲಾಯಿತು. ಇನ್ನರವ್ಹೀಲ್ ಕ್ಲಬ್ ಕಾರ್ಯದರ್ಶಿ ಅನಿತಾ, ಸದಸ್ಯೆ ವೀಣಾ, ಶಾಲಾ ನಾಯಕ ಪ್ರಣಾಮ್, ಉಪನಾಯಕ ಸುಹಾನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ತೆರೆಸಾ ಪ್ರತಿಜ್ಞಾವಿಧಿ ಬೋಧಿಸಿದರು. ಸಾನಿಕಾ ನಿರೂಪಿಸಿದರು. ಹೈಫಾ ಫತಿಮಾ ವಂದಿಸಿದರು.