ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಕೊರತೆ: ಬಿಜೆಪಿ ಮಂಡಲದಿಂದ ಕಿನ್ನಿಗೋಳಿಯಲ್ಲಿ "ಜನಾಕ್ರೋಶ ಪ್ರತಿಭಟನೆ"

ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಕೊರತೆ: ಬಿಜೆಪಿ ಮಂಡಲದಿಂದ ಕಿನ್ನಿಗೋಳಿಯಲ್ಲಿ "ಜನಾಕ್ರೋಶ ಪ್ರತಿಭಟನೆ"


ಮೂಡುಬಿದಿರೆ: ಜಿಲ್ಲೆಯಲ್ಲಿ ತಲೆದೋರಿರುವ ಮರಳು-ಕೆಂಪು ಕಲ್ಲು ಕೊರತೆ, ನಿರ್ಮಾಣ ಕ್ಷೇತ್ರಕ್ಕೆ ಉಂಟಾಗಿರುವ ತೊಂದರೆ ಹಾಗೂ ರಾಜ್ಯ ಕಾಂಗ್ರೆಸ್ ಸರಕಾರ ನೇತೃತ್ವದ  ವಿಫಲ ಆಡಳಿತವನ್ನು ಖಂಡಿಸಿ “ಜನಾಕ್ರೋಶ ಪ್ರತಿಭಟನೆ” ಸೋಮವಾರ ಸಂಜೆ ಕಿನ್ನಿಗೋಳಿಯಲ್ಲಿ ನಡೆಯಿತು.

ಶಾಸಕ ಉಮಾನಾಥ ಎ. ಕೋಟ್ಯಾನ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಇಡೀ ರಾಜ್ಯದಲ್ಲಿ ಮರಳು ಮತ್ತು ಕೆಂಪುಕಲ್ಲು ಲಭ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿರುವುದರಿಂದ ಕಟ್ಟಡ ಹಾಗೂ ಕೆಂಪು ಕಲ್ಲಿನ ಕೋರೆಗಳಲ್ಲಿ ದುಡಿಯುವ ಸಾವಿರಾರು ಕೂಲಿ ಕಾರ್ಮಿಕರ ಬದುಕು ಹಾಗೂ ಲಕ್ಷಾಂತರ ಜನರ ಬಾಳಿಗೆ ತೊಂದರೆಯಾಗಿದೆ. ಈ ಪರಿಸ್ಥಿತಿ ಜನರ ಜೀವನಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. 


ಜಿಲ್ಲೆಯಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಮೀನುಗಾರಿಕೆ ಮತ್ತು ಕಟ್ಟಡ ನಿಮಾ೯ಣಗಳ ಕೆಲಸಗಳು ನಡೆಯುತ್ತಿರುವುದರಿಂದ  ಬಡ ಕಾಮಿ೯ಕರು ಅದರಲ್ಲೇ ಜೀವನ ಸಾಗಿಸುವ ಅನಿವಾಯ೯ತೆಯಿರುವುದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹೌತ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು, ಜಿಲ್ಲೆಯ ಶಾಸಕರುಗಳನ್ನು, ಸ್ಪೀಕರ್ ನ್ನು ಒಳಗೊಂಡು ಸಭೆ ಕರೆಯಬೇಕು. ಅದರಲ್ಲಿ ಕರಾವಳಿ ಜಿಲ್ಲೆಗೆ ಹೊಯ್ಗೆಯನ್ನು ಮೈನ್ಸ್ ನಿಂದ ತೆಗೆದು ಕೆಂಪುಕಲ್ಲಿನ ಕೋರೆಯಲ್ಲಿ ದುಡಿಯುವವರ ರಕ್ಷಣೆಗಾಗಿ ಮುಂದೆ ಬರಬೇಕು. 

ಅಲ್ಲದೆ ಆದಷ್ಟು ಬೇಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕೆಂಪು ಕಲ್ಲು ಮತ್ತು ಹೊಯ್ಗೆಯನ್ನು ಬೇಪ೯ಡಿಸಿ ಸಾಮಾನ್ಯ ವಾದ ಕಾನೂನನ್ನು ತಂದು ಸಕ್ರಮಗೊಳಿಸಲು ಅನುಮತಿಕೊಡುವಂತಹ ಕೆಲಸಗಳನ್ನು ಮಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಂತೆ ಸರಕಾರವನ್ನು ಒತ್ತಾಯಿಸಿದ ಅವರು ಸಮಸ್ಯೆಗೆ ಪರಿಹಾರ ಸಿಗದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.

ಮಂಡಲ ಅಧ್ಯಕ್ಷ ದಿನೇಶ್ ಪುತ್ರನ್ ಅವರು ಮಾತನಾಡಿ ಕಾಂಗ್ರೆಸ್ ಸರಕಾರ ಜನ ಸಾಮಾನ್ಯರ ಬಾಳಿನಲ್ಲಿ ಆಟವಾಡಬಾರದು. ಬಡವರ ಹಾಗೂ ನ್ಯಾಯದ ಪರವಾಗಿ ಬಿಜೆಪಿ ಹೋರಾಟ ಮಾಡುತ್ತಿದೆ. ಸಮಾನತೆಯಿಂದ ನ್ಯಾಯ ನೀಡಿ. ಕಾಂಗ್ರೆಸ್ ಸರ್ಕಾರದ ದುರ್ಬಲ ನೀತಿ ಹಾಗೂ ಲಂಚದ ವ್ಯವಸ್ಥೆಯು ಹಲವುಸಮಸ್ಯೆಗೆ ಕಾರಣವಾಗಿದೆ ಎಂದ ಅವರು ವ್ಯವಸ್ಥೆಯನ್ನು ಸಕ್ರಮಗೊಳಿಸಿ ಇಲ್ಲದಿದ್ದರೆ ಇದೀಗ ಹಟ್ಟಿಯಿಂದ ಅಕ್ರಮವಾಗಿ ದನಗಳನ್ನು ಕದ್ದುಕೊಂಡು ಹೋದಂತೆ ಮುಂದೊಂದು ದಿನ ಕೆಂಪು ಕಲ್ಲಿನಲ್ಲಿ ನಿಮಿ೯ಸಿರುವ ಕಂಪೌಂಡ್ ಗಳನ್ನು ಕೆಡವಿ ಕಲ್ಲುಗಳನ್ನು ಕದ್ದುಕೊಂಡು ಹೋಗಬಹುದು ಎಂದು ಎಚ್ಚರಿಸಿದ ಅವರು ಸರಕಾರ ಜನರ ಅಗತ್ಯವಾದ ವಸ್ತುಗಳನ್ನು ಒದಗಿಸುವತ್ತ ಗಮನ ಹರಿಸಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷರು ಸುನಿಲ್ ಆಳ್ವ, ಶಾಂತಿ ಪ್ರಸಾದ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳು ರಂಜಿತ್ ತೋಡಾರ್ ಮತ್ತು ಹರೀಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ,  ಪಕ್ಷದ ಮುಖಂಡರುಗಳಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಅಭಿಲಾಷ್ ಕಟೀಲ್, ಸತೀಶ್ ಅಂಚನ್, ನವೀನ್ ರಾಜ್, ಶೈಲೇಶ್ ಕುಮಾರ್, ರಂಗನಾಥ ಶೆಟ್ಟಿ, ಅಶ್ವತ್ ಪಣಪಿಲ,  ಬಜಪೆ ವಲಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್ ಪೂಜಾರಿ, ಮಹಿಳಾ ಮುಖಂಡರಾದ ಆಶಾ ರತ್ನಾಕರ, ಸರೋಜಿನಿ ಗುಜರನ್, ಹೇಮಲತಾ, ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತ ಪೂಂಜಾ , ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಪಡು ಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ ಚಂದ್ರಶೇಖರ್, ಮೂಡಬಿದ್ರಿ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗೇಶ್ ಪೂಜಾರಿ ಒಂಟಿಕಟ್ಟೆ, ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್ ತೋಡಾರು, ವಿನೋದ್ ಕುಮಾರ್ ಬೊಳ್ಳೂರು, ಜೀವನ್ ಪ್ರಕಾಶ್, ಲಕ್ಶ್ಮಣ ಸಾಲ್ಯಾನ್ ಪುನರೂರು, ಪುರುಷೋತ್ತಮ ಶೆಟ್ಟಿಗಾರ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಗಣ್ಯರು ಮತ್ತಿತರರು  ಉಪಸ್ಥಿತರಿದ್ದರು. 

ಅಭಿಲಾಷ್ ಶೆಟ್ಟಿ ಕಟೀಲ್ ಸ್ವಾಗತಿಸಿ, ಸೋಮನಾಥ್ ತೋಕೂರು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article