ಹೃದಯ ತಪಾಸಣಾ ಶಿಬಿರ: ಹೃದಯಾಘಾತ ಪ್ರಕರಣಗಳಲ್ಲಿ ಏರಿಕೆ-ಮುನ್ನೆಚ್ಚರಿಕೆ, ತಪಾಸಣೆ ಅಗತ್ಯ

ಹೃದಯ ತಪಾಸಣಾ ಶಿಬಿರ: ಹೃದಯಾಘಾತ ಪ್ರಕರಣಗಳಲ್ಲಿ ಏರಿಕೆ-ಮುನ್ನೆಚ್ಚರಿಕೆ, ತಪಾಸಣೆ ಅಗತ್ಯ


ಮಂಗಳೂರು: ಯುವಕರಲ್ಲಿ ಹಠಾತ್ ಹೃದಯಾಘಾತಗಳ ಪ್ರಕರಣಗಳ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಮತ್ತು ತಪಾಸಣೆ ಅಗತ್ಯ ಎಂದು ಇಂಡಿಯಾನ ಆಸ್ಪತ್ರೆ ಮುಖ್ಯ ಹೃದಯ ತಜ್ಞ, ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ ಹೇಳಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲಿ ಹಠಾತ್ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಇಂತಹ ಪ್ರಕರಣಗಳನ್ನು ದಾಖಲಿಸಲು ಕ್ರಮ ಕೈಗೊಂಡಿದ್ದು, ಈ ತೀವ್ರತೆಯು ಮಾಪನೀಯವಾಗಿ ಏರಿಕೆಯಾಗುತ್ತಿರುವದೆಯೇ ಎಂಬುದನ್ನು ಅಧ್ಯಯನ ಮಾಡಲು ಮುಂದಾಗಿದೆ. ಆದರೆ ಈ ಏರಿಕೆಗೆ ನಿಖರವಾದ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದರು.

ನಿದ್ರೆ ಕೊರತೆ, ನಿರ್ಜಲಿತ ಸ್ಥಿತಿ, ಶಾರೀರಿಕ ಚಟುವಟಿಕೆ ಕೊರತೆ,  ಆಹಾರದ ವ್ಯತ್ಯಾಸದಿಂದ ಹೃದಯದ ಮೇಲೆ ದುಷ್ಪರಿಣಾಮ ಬೀರಲಿದೆ ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ, ಕೆಲಸದ ಒತ್ತಡ, ವೈಯಕ್ತಿಕ ಜೀವನದ ಉದ್ವಿಗ್ನತೆ, ಸಕ್ಕರೆ, ರಕ್ತದೊತ್ತಡ, ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಕುಟುಂಬದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಇತಿಹಾಸದಿಂದಲೂ ಸಮಸ್ಯೆಯಾಗುತ್ತಿದೆಎ ಎಂದರು. 

ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದ ಸೂಚನೆಗಳು ಇರುವವರು-ಕುಟುಂಬ ಇತಿಹಾಸ, ತಡವಾಗಿ ವ್ಯಾಯಾಮ ಪ್ರಾರಂಭ, ಜಡ ಜೀವನಶೈಲಿ ಹೊಂದಿರುವವರು -ಪ್ರತಿವರ್ಷ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹೃದಯ ತಪಾಸಣಾ ಶಿಬಿರ..

ಮಂಗಳೂರು ಇಂಡಿಯಾನಾ ಆಸ್ಪತ್ರೆಯು ಜನರಲ್ಲಿ ಜಾಗೃತಿ ಮೂಡಿಸಲು ’ಲವ್ ಯೂವರ್ ಹಾರ್ಟ್’ ಪ್ಯಾಕೇಜ್ ಅನ್ನು ರೂ. 1999ಗೆ ನೀಡುತ್ತಿದೆ (ಸಾಧಾರಣ ಶುಲ್ಕ ರೂ. 4500). ಈ ವಿಶೇಷ ತಪಾಸಣಾ ಅವಕಾಶ ಜುಲೈ 15 ರಿಂದ 31, 2025 ರವರೆಗೆ ಲಭ್ಯವಿದೆ. ಮುಂಗಡ ಬುಕ್ ಮಾಡಲು  9611953300 ಕರ ಮಾಡಬಹುದು. 

ಆಸ್ಪತ್ರೆ ಮಾರ್ಕೆಟಿಂಗ್ ಕನ್ಸಲ್‌ಟೆಂಟ್ ಶಿವಪ್ರಸಾದ್ ಶೆಟ್ಟಿ, ವಿಜಯ ಚಂದ್ರ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article