
ಜೈ ಹಿಂದ್ ಟ್ಯೂಬ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಿಂದ ರಾಸಾಯನಿಕ ಯುಕ್ತ ಹೂಗೆ: ಜನರಿಗೆ ಹಾಗೂ ಮಕ್ಕಳಿಗೆ ಚರ್ಮದ ಕಾಯಿಲೆ ಹಾಗೂ ಉಸಿರಾಟದ ಸಮಸ್ಯೆ
ಪಡುಬಿದ್ರಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿ ನಡ್ಸಾಲು ಗ್ರಾಮದಲ್ಲಿರುವ ಸ್ಟೀಲ್ ಉತ್ಪಾದನೆಯನ್ನು ಮಾಡುವ ಜೈ ಹಿಂದ್ ಟ್ಯೂಬ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಳೆದ 2 ವರ್ಷಗಳಿಂದ ಕಾರ್ಯ ನಿರ್ವಹಿಸುತಿದ್ದು, ಈ ಕಂಪನಿಯಿಂದ ಹೊರಸೂಸುವ ರಾಸಾಯನಿಕ ಯುಕ್ತ ಹೂಗೆಯಿಂದ ಸ್ಥಳೀಯ ಜನರಿಗೆ ಹಾಗೂ ಮಕ್ಕಳಿಗೆ ಚರ್ಮದ ಕಾಯಿಲೆಗಳು ಹಾಗೂ ಉಸಿರಾಟದ ಸಮಸ್ಯೆಗಳು ಉಂಟಾಗಿದೆ.
ಸ್ಥಳೀಯ ಜನರ ಅರೋಗ್ಯ ಸಮಸ್ಯೆಗಳು ದಿನದಿಂದ ದಿನ ಹದಗೆಡುತ್ತಿದೆ. ಅದಲ್ಲದೇ, ಕಂಪನಿಯಿಂದ ಬಿಡುತ್ತಿರುವ ಕಲುಷಿತ ನೀರನ್ನು ಬೇಸಾಯದ ಗದ್ದೆಗಳಿಗೆ ಬಿಡುವುದರಿಂದ ಬೆಳೆಗಳು ನಾಶವಾಗುತಿದೆ ವ್ಯವಸಾಯವನ್ನೆ ನಂಬಿ ಕುಟುಂಬದ ಜೀವನವನ್ನು ಸಾಗಿಸುತ್ತಿರುವ ಕೃಷಿಕರಿಗೆ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಈ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಈ ಸಮಸ್ಯೆಗಳ ಬಗ್ಗೆ ಯಾರು ಕೇಳುವವರಿಲ್ಲದೇ ಬಡ ಕುಟುಂಬದ ಜನರ ಪಾಡು ಅಧೋಗತಿಯಾಗಿದೆ. ಆದ್ದರಿಂದ ಕಂಪನಿಯ ಸುತ್ತಮುತ್ತ ಬದುಕುತ್ತಿರುವ ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ, ಜೈ ಹಿಂದ್ ಟ್ಯೊಬ್ಸ್ ಕಂಪನಿಯಿಂದ ಸ್ಥಳೀಯಾ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆ ಹಾಗೂ ಪರಿಸರ ಮಾಲಿನ್ಯವಾಗದಂತೆ ಸೂಕ್ತ ಕಾನೂನು ಕ್ರಮ ಕೈಗೂಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಬಗ್ಗೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಯವರು ತಕ್ಷಣವೇ ಪರಿಸರ ಇಲಾಖಾಧಿಕಾರಿಗಳ ಜೊತೆ ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.