
ಹಲ್ಲೆ ಪ್ರಕರಣ: ಇಬ್ಬರ ದೂರು
ಪುತ್ತೂರು: ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ವ್ಯಕ್ತಿಯೊಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆದ ಪ್ರಕರಣ ನಡೆದಿದೆ.
ಖಾಸಗಿಹಣಕಾಸು ಸಂಸ್ಥೆಯೊಂದರ ವ್ಯವಸ್ಥಾಪಕ ಪ್ರಸಾದ್ ಗೌಡ ಎಂಬವರು ಉರ್ಲಾಂಡಿ ನಿವಾಸಿ ಹರೀಶ್ ಕುಮಾರ್ ಹೆಗ್ಡೆ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಕಡಬದಲ್ಲಿ ಗ್ರಾಮಾಡಳಿತಕಾರಿಯಾಗಿ ಕೆಲಸ ಮಾಡುತ್ತಿದ್ದ ಹರೀಶ್ ಕುಮಾರ್ ಅವರಿಗೆ ಬಾಡಿ ಸ್ಕ್ಯಾನಿಂಗ್ ಸ್ಟಿಕ್‌ನಿಂದ ತಲೆಗೆ ಹಾಗೂ ಕುತ್ತಿಗೆಯ ಭಾಗಕ್ಕೆ ಹಲ್ಲೆ ನಡೆಸಲಾಗಿದೆ. ತಲೆಯಲ್ಲಿ ರಕ್ತಸ್ರಾವವಾಗಿದೆ ಎಂದು ಆರೋಪಿಸಲಾಗಿದೆ. ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಡುವೆ ನನ್ನ ಮೇಲೆ ಹರೀಶ್ ಕುಮಾರ್ ಹೆಗ್ಡೆ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಖಾಸಗಿ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ಪ್ರಸಾದ್ ಗೌಡ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಠಾಣೆಯ ಉಪನಿರೀಕ್ಷಕ ಜಾನ್ಸನ್ ಡಿಸೋಜ ಹಾಗೂ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ತನಿಖೆ ನಡೆಸಿದ್ದಾರೆ.