ಸಂತ್ರಸ್ತೆಯ ಪರವಾಗಿದೆ ಪಕ್ಷ-ಕೊಟ್ಟ ಮಾತಿಗೆ ತಪ್ಪಿದರೆ ಶಿಸ್ತುಕ್ರಮ: ಸತೀಶ್ ಕುಂಪಲ ಎಚ್ಚರಿಕೆ

ಸಂತ್ರಸ್ತೆಯ ಪರವಾಗಿದೆ ಪಕ್ಷ-ಕೊಟ್ಟ ಮಾತಿಗೆ ತಪ್ಪಿದರೆ ಶಿಸ್ತುಕ್ರಮ: ಸತೀಶ್ ಕುಂಪಲ ಎಚ್ಚರಿಕೆ

ಪುತ್ತೂರು: ಯುವತಿಗೆ ಮಗುವಿನಭಾಗ್ಯ ಕರುಣಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಿಲುವು ಸ್ಪಷ್ಟವಿದೆ. ಸಂತ್ರಸ್ತೆಯ ಪರವಾಗಿ ಪಕ್ಷ ಗಟ್ಟಿಯಾಗಿ ನಿಲ್ಲುತ್ತದೆ. ನಗರಸಭೆಯ ಸದಸ್ಯ ಪಿ.ಜಿ. ಜಗನ್ನೀವಾಸ ರಾವ್ ಅವರಲ್ಲಿ ಮಾತುಕತೆ ನಡೆಸಲಾಗಿದೆ. ಕೊಟ್ಟ ಮಾತಿಗೆ ತಪ್ಪಿದರೆ ಅವರ ಮೇಲೆಯೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ತಿಳಿಸಿದರು.

ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನಗರಸಭೆಯ ಸದಸ್ಯನ ಪುತ್ರನಿಂದ ನಡೆದ ಘಟನೆಯ ಬಗ್ಗೆ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಸುಮ್ಮನೆ ಕುಳಿತಿಲ್ಲ. ಘಟನೆಯ ಬಳಿಕ ಪುತ್ತೂರು ಶಾಸಕರ ಮಧ್ಯಸ್ಥಿಕೆಯಲ್ಲಿ ಯಾವುದೇ ರಾಜಕೀಯ ಮಾಡದೆ ಆರೋಗ್ಯಕರ ರೀತಿಯಲ್ಲಿ ಮಾತುಕತೆ ನಡೆದಿದೆ. ಈ ಘಟನೆ ಬೇರೆ ಆಯಾಯ ಪಡೆದುಕೊಳ್ಳಬಾರದು ಎಂಬ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು. 

ಶಾಸಕರ ಪ್ರಕ್ರಿಯೆಗೆ ಪೂರ್ಣ ಬೆಂಬಲ:

ಸಂತ್ರಸ್ತೆ ವಿವಿಧ ಸಂಘಟನೆಗಳನ್ನು ಬೇಟಿ ಮಾಡಿದ್ದಾರೆ. ಶಾಸಕರನ್ನು ಭೇಟಿಯಾಗಿದ್ದಾರೆ. ಮಾತುಕೊಟ್ಟ ಬಳಿಕ ಶಾಸಕರು ಇದನ್ನು ಈಡೇರಿಸುವ ವಿಶ್ವಾಸ ಇತ್ತು. ಅವರು ಮಾಡಿರುವ ಪ್ರಕ್ರಿಯೆಯನ್ನು ಮುಂದುವರಿಸುವುದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಶಾಸಕರ ಮಧ್ಯೆ ನಾವು ಮಾತನಾಡುವುದು ಸರಿಯಲ್ಲ. ಅವರ ಹೇಳಿಕೆಯನ್ನು ನಾವು ನೋಡಬೇಕಲ್ವಾ. ಪಕ್ಷದ ಪ್ರಮುಖರನ್ನು ಭೇಟಿ ಮಾಡದಿದ್ದರೂ ನಮಗೂ ಜವಾಬ್ದಾರಿ ಇದೆ. ಸಂತ್ರಸ್ತೆಗೆ ನ್ಯಾಯ ಕೊಡಿಸುವ ಜವಾಬ್ದಾರಿ ನಮ್ಮ ಮೇಲೆಯೂ ಇದೆ ಎಂದು ಅವರು ಹೇಳಿದರು. 

ಸಂತ್ರಸ್ತೆಯ ಸಮಸ್ಯೆ ಸರಿಯಾಗಿಲ್ಲ ಎಂಬುದನ್ನು ಸಂತ್ರಸ್ತೆಯ ತಾಯಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ನಮ್ಮ ಪಕ್ಷದ ಪೂರ್ಣ ಪ್ರಮಾಣದ ಯೋಚನೆ ಸಂತ್ರಸ್ತೆಯ ಪರವಾಗಿದೆ. ಜಗನ್ನಿವಾಸ್ ರಾವ್ ಅವರ ಪುತ್ರ ಹಾಗೂ ಸಂತ್ರಸ್ತ ಯುವತಿಯ ನಡುವೆ ವಿವಾಹವಾಗಬೇಕೆಂಬ ತಾಯಿಯ ಬೇಡಿಕೆಯ ಪರವಾಗಿದ್ದೇವೆ. ಮಗುವಾದ ಬಳಿಕ ಮದುವೆ ಮಾಡಿಸಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಸಂತ್ರಸ್ತೆಗೆ ಯಾವುದೇ ಅನ್ಯಾಯವಾಗಬಾರದು ಎಂದು ಅವರು ತಿಳಿಸಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವರ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಮಾಜಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article