
‘ಸಾಹಸ ಪ್ರವೃತ್ತಿ-ಆರೋಗ್ಯ ಮತ್ತು ಸ್ವಾವಲಂಬಿ ಜೀವನ ತಂತ್ರಗಳು’ ಉಪನ್ಯಾಸ
Saturday, July 5, 2025
ಶಿರ್ವ: ದ.ಕ. ಜಿಲ್ಲಾ ಸ್ಕೌಟ್ ಸಹಾಯಕ ಕಮಿಷನರ್ ಶೇಖ್ ಇರ್ಫಾನ್ ಕುಟಂಲ್ಪಾಡಿ ಮತ್ತು ಕೊಡ್ಯಾಕ್ ಬೂಟ್ ಕ್ಯಾಂಪ್ ಪ್ರವೈಟ್ ಲಿ. ಇದರ ನಿರ್ದೇಶಕಿ ಫಾಮಿದಾ ಬೇಗಂ ಇವರು ಶುಕ್ರವಾರ ಬಂಟಕಲ್ಲು ರೋಟರಿ ಭವನದಲ್ಲಿ ಜರುಗಿದ ರೋಟರಿ ಕಾರ್ಯಕ್ರಮದಲ್ಲಿ ‘ಸಾಹಸ ಪ್ರವೃತ್ತಿ-ಆರೋಗ್ಯ ಮತ್ತು ಸ್ವಾವಲಂಬಿ ಜೀವನ ತಂತ್ರಗಳು’ ಈ ಬಗ್ಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಶಿರ್ವ ರೋಟರಿ ಅಧ್ಯಕ್ಷ ವಿಲಿಯಮ್ ಮಚಾದೋ, ಕಾರ್ಯದರ್ಶಿ ಹೊನ್ನಯ್ಯ ಶೆಟ್ಟಿಗಾರ್, ಮಾಜಿ ಅಧ್ಯಕ್ಷ ರಘುಪತಿ ಐತಾಳ್ ಸಹಿತ ರೋಟರಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.