
ಕೊಲ್ಲಮೊಗ್ರುನಲ್ಲಿ ಪರಿಸರ ಜಾಗೃತಿ ಅಭಿಯಾನ
Tuesday, July 22, 2025
ಸುಬ್ರಹ್ಮಣ್ಯ: ಸರಕಾರಿ ಹಿರಿಯ ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಇಲ್ಲಿನ ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಲ್ಲಮೊಗ್ರು, ಸುಳ್ಯ ಇದರ ವತಿಯಿಂದ ಪರಿಸರ ಜಾಗೃತಿಯ ಬಗ್ಗೆ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ವಲಯ ಒಕ್ಕೂಟದ ಅಧ್ಯಕ್ಷ ಹಾಗೂ ಕೊಲ್ಲಮೊಗ್ರು ಒಕ್ಕೂಟದ ಅಧ್ಯಕ್ಷ ತೀರ್ಥರಾಮ ದೋಣಿಪಳ್ಳ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಕಮಲ ಎ. ವಹಿಸಿದ್ದರು.
ಈ ಸಂದರ್ಭದಲ್ಲಿ ತರಗತಿವಾರು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಗಳನ್ನು ವಿತರಿಸಿದರು. ಹಣ್ಣಿನ ಗಿಡಗಳನ್ನು ಶಾಲಾ ಮಂತ್ರಿಮಂಡಲದ ನಾಯಕರಿಗೆ ವಿತರಿಸಲಾಯಿತು.
ಶ್ರೀ.ಕ್ಷೇ.ಧ.ಕ್ಷೇ.ಗ್ರಾ.ಯೋ. ಇದರ ಸುಳ್ಯ ತಾಲೂಕಿನ ಕೃಷಿ ಅಧಿಕಾರಿ ರಮೇಶ್, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಕಟ್ಟ, ಉಪಾಧ್ಯಕ್ಷ ಮಾಧವ ಚಾಂತಾಳ, ಸುಬ್ರಹ್ಮಣ್ಯ ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷೆ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಚಾಂತಾಳ, ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಕೊಲ್ಲಮೊಗ್ರು, ಶಿರೂರು-ಚಾಂತಾಳ ಒಕ್ಕೂಟದ ಉಪಾಧ್ಯಕ್ಷ ಚಂದ್ರಶೇಖರ ಕೋನಡ್ಕ, ತಾಲೂಕು ಭಜನಾ ಪರಿಷತ್ತಿನ ಸಂಯೋಜಕ ಮತ್ತು ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಸತೀಶ್ ಟಿ.ಎನ್., ಕೊಲ್ಲಮೊಗ್ರು ಬಿ ಒಕ್ಕೂಟದ ಅಧ್ಯಕ್ಷ ಹೇಮಂತ್ ದೊಲನಮನೆ, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ, ಕೊಲ್ಲಮೊಗ್ರು ಸೇವಾಪ್ರತಿನಿಧಿ ಸಾವಿತ್ರಿ ನೀಡುಬೆ, ಪೋಷಕರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.