
ಕಡಿರುದ್ಯಾವರ ಒಂಟಿ ಸಲಗ ಹಾವಳಿ
Wednesday, July 2, 2025
ಉಜಿರೆ: ಕಡಿರುದ್ಯಾವರ ಗ್ರಾಮದ ಮಲ್ಲಡ್ಕ ಪರಿಸರದಲ್ಲಿ ಕೃಷಿ ತೋಟಗಳಿಗೆ ನುಗ್ಗಿದ ಒಂಟಿ ಸಲಗ ಕೃಷಿ ಹಾನಿ ಉಂಟು ಮಾಡಿದೆ.
ಮಂಗಳವಾರ ತಡರಾತ್ರಿ ಇಲ್ಲಿಯ ಭಾರತಿ ಹೆಬ್ಬಾರ್, ರಮೇಶ್ ಹಾಗೂ ಇತರರ ತೋಟಗಳಿಗೆ ದಾಳಿ ಇಟ್ಟ ಒಂಟಿ ಸಲಗ ಅಡಕೆ ಮರ, ಬಾಳೆ ಗಿಡಗಳನ್ನು ಮುರಿದು ಹಾಕಿದೆ. ಒಂಟಿ ಸಲಗ ಮನೆಗಳ ಹತ್ತಿರದ ವರೆಗೂ ಸುಳಿದಿದ್ದು ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟುಮಾಡಿದೆ .