
ಶ್ರೀ ನರಸಿಂಹಾಶ್ರಮ ಸ್ವಾಮೀಜಿಯವರು ನಿಧನಕ್ಕೆ ಹೆಗ್ಗಡೆ ಸಂತಾಪ
Saturday, July 5, 2025
ಉಜಿರೆ: ಬಾಳೆಕುದ್ರು ಮಠದ ಶ್ರೀ ನರಸಿಂಹಾಶ್ರಮ ಸ್ವಾಮೀಜಿಯವರು ನಿಧನರಾದ ವಿಚಾರ ತಿಳಿದು ದುಃಖವಾಯಿತು.
2006 ರಿಂದ ಪೀಠಾಧಿಪತಿಗಳಾಗಿ ಸೇವೆ ಸಲ್ಲಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಅವರು ಹಿಂದೊಮ್ಮೆ ಆಗಮಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು.
ಶ್ರೀ ಮಠವು ಸಾವಿರಾರು ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದ್ದು, ಶ್ರೀಗಳವರು ಸನಾತನ ಧರ್ಮದ ಅದ್ವೈತ ಸಂಪ್ರದಾಯದ ಪ್ರವರ್ತಕರಾಗಿದ್ದರು. ಕರ್ನಾಟಕದಲ್ಲಿ ಈ ಮಟ್ಟದ ಹಲವಾರು ಶಾಖೆಗಳು ಇದ್ದು ಅನೇಕ ಸದ್ಧರ್ಮ ಕಾರ್ಯಗಳು ನಡೆದಿವೆ. ಮುಂದೆ ಶ್ರೀಮಠದ ಉತ್ತರಾಧಿಕಾರಿ ಹಿರಿಯ ಶ್ರೀಗಳ ಹಾದಿಯಲ್ಲಿ ಸಾಗಿ ಸಮಾಜಮುಖಿ ಧರ್ಮಕಾರ್ಯಗಳನ್ನು ನಡೆಸುವಂತಾಗಲಿ ಎಂದು ಆಶಿಸುತ್ತಾ ಶ್ರೀಗಳ ಬ್ರಹ್ಮೈಕ್ಯರಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಸಂತಾಪ ಸೂಚಿಸಿದ್ದಾರೆ.