
ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿರುದ್ಧ ಪ್ರಕರಣ ದಾಖಲು
Wednesday, July 2, 2025
ಉಜಿರೆ: ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ಫೊಟೋಗಳೊಂದಿಗೆ ನಗ್ನ ಮಹಿಳೆಯ ಫೊಟೋವನ್ನು ಹಾಕಿ ಹಿಂದೂ ಧರ್ಮದ ದೇವರುಗಳ ಫೊಟೋಗಳನ್ನು ಬಿಂಬಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ವಾಟ್ಸಪ್ ಸ್ಟೇಟಸ್ ಪೋಸ್ಟ್ ಮಾಡಿದ ಅಜಿ.ಎಂ ಜೋಸೆಫ್ ಎಂಬಾತನ ವಿರುದ್ಧ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪೋಸ್ಟ್ ನಿಂದ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗುವಂತೆ ಹಾಗೂ ದ್ವೇಷ ಭಾವನೆಗೆ ಕಾರಣವಾಗಿದೆ ಎಂದು ದೂರು ನೀಡಲಾಗಿದ್ದು ಅದರಂತೆ ವೇಣೂರು ಠಾಣೆಯಲ್ಲಿ 353(2)BNS 2023 ರಂತೆ ಪ್ರಕರಣ ದಾಖಲಿಸಲಾಗಿದೆ.