ಜು.14 ರಂದು ಅಬ್ಬಕ್ಕ 500ರ 14ನೇ ಕಾರ್ಯಕ್ರಮ

ಜು.14 ರಂದು ಅಬ್ಬಕ್ಕ 500ರ 14ನೇ ಕಾರ್ಯಕ್ರಮ

ಉಳ್ಳಾಲ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗ ಮತ್ತು ಅಬ್ಬಕ್ಕ ಟಿವಿ ಸಹಯೋಗದಲ್ಲಿ ರಾಣಿ ಅಬ್ಬಕ್ಕ 500 ಸರಣಿಯ 14ನೇ ಕಾರ್ಯಕ್ರಮ ಉಳ್ಳಾಲ ತಾಲೂಕಿನ ಕೊಲ್ಯದ ಸೌಂದರ್ಯ ಸಭಾಂಗಣದಲ್ಲಿ ನಡೆಯಲಿದ್ದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಅತಿಥಿ ಗಣ್ಯರು ಪಾಲ್ಗೊಳಲಿದ್ದಾರೆ ಎಂದು ಕೆಆರ್‌ಎಂಎಸ್‌ಎಸ್‌ನ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.14 ರಂದು ಮಧ್ಯಾಹ್ನ ಗಂಟೆ 3.30ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, ಬಿ.ಸಿ ರೋಡ್ ಸಂಚಯಗಿರಿಯ ರಾಣಿಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೆಶಕ ಡಾ. ತುಕಾರಾಂ ಪೂಜಾರಿ ಉದ್ಘಾಟಿಸಲ್ಲಿದ್ದಾರೆ. ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಟ್ರಸ್ಟ್ ಅಧ್ಯಕ್ಷ ದಿನಕರ ಉಳ್ಳಾಲ್ ರಾಣಿ ಅಬ್ಬಕ್ಕ ನ ಕುರಿತು ಉಪನ್ಯಾಸ ನಿಡಲಿದ್ದಾರೆ. ಉದ್ಯಮಿ ಸೌಂದರ್ಯ ರಮೇಶ್, ಅಬ್ಬಕ್ಕ ಟಿವಿಯ ನಿರ್ದೇಶಕ ಶಶಿಧರ್ ಪೊಯ್ಯತ್ತಬೈಲ್ ಅತಿಥಿಗಳಾಗಿ ಪಾಲ್ಗೊಲಿದ್ದಾರೆ ಎಂದು ಅವರು ತಿಳಿಸಿದರು.

ಬಳಿಕ ನಡೆಯಲಿರುವ ಅಬ್ಬಕ್ಕ ಟಿ.ವಿ 13ರ ಕಾರ್ಯಕ್ರಮದಲ್ಲಿ ಡಾ. ತುಕಾರಾಂ ಪೂಜಾರಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ಉಳ್ಳಾಲ ತಾಲೂಕಿನ ಪ್ರಥಮ ಪೈಲೆಟ್ ಚರಣ್ ರಾಜ್ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ಅವರಿಗೆ ಪುರಸ್ಕಾರ ಪ್ರದಾನವಾಗಲಿದ್ದು ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಎಸ್. ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೆ.ಟಿ. ಸುವರ್ಣ, ಗೋಪಾಲ ಕುತ್ತಾರು, ವಿಜೇಶ್ ಬಿ. ಶೆಟ್ಟಿ ಮತ್ತಿತರರು ಪಾಲ್ಗೊಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article