ಬಂಟ್ವಾಳ ಪುರಸಭೆ: ಅಧಿಕಾರ ಅವಧಿ ಪೂರ್ಣ

ಬಂಟ್ವಾಳ ಪುರಸಭೆ: ಅಧಿಕಾರ ಅವಧಿ ಪೂರ್ಣ

ಬಂಟ್ವಾಳ: ನಗರಸ್ಥಳೀಯಾಡಳಿತ ಸಂಸ್ಥೆಗಳ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಪ್ರಕಟವಾಗುವಲ್ಲಾದ ವಿಳಂಬದಿಂದಾಗಿ  ರಾಜ್ಯದ ೧೮೮ ನಗರಸ್ಥಳೀಯಾಡಳಿತ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ಅಧಿಕಾರವಧಿ ಮೊಟಕುಗೊಳ್ಳಲಿದ್ದು,ಬಂಟ್ವಾಳ ಪುರಸಭೆಯಲ್ಲಿರುವ ಕಾಂಗ್ರೆಸ್-ಎಸ್ ಡಿಪಿಐಯ ಮೈತ್ರಿಯ ಅಧಿಕಾರವಧಿ ನ.7 ರಂದು ಕೊನೆಗೊಳ್ಳಲಿದೆ.

ನಗರ ಸ್ಥಳೀಯಾಡಳಿತ ಸಂಸ್ಥೆಯ ಐದು ವರ್ಷದ ಜನಪ್ರತಿನಿಧಿಗಳ ಆಡಳಿತಾವಧಿಗೆ ತಲಾ ಎರಡೂವರೆ ವರ್ಷಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆಮೀಸಲಾತಿ ಪ್ರಕಟವಾಗುತ್ತದೆ.

ಅದರಂತೆ ಬಹುಮತವಿರುವ ಪಕ್ಷಗಳು ನೂತನ ಅಧ್ಯಕ್ಷ,ಉಪಾಧ್ಯಕ್ಷರನ್ನು ಆಯ್ಕೆಗೊಳಿಸುತ್ತದೆ.

ಬಂಟ್ವಾಳ ಪುರಸಭೆಯಲ್ಲಿ ಮೊದಲ ಎರಡು ವರ್ಷದಲ್ಲಿ ಅಧ್ಯಕ್ಷರಾಗಿದ್ದ ಶರೀಫ್,ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಅವರು ಪೂರ್ತಿ ಎರಡೂವರೆ ವರ್ಷ ಆಡಳಿತ ನಡೆಸಿದ್ದರೆ. ನಂತರದ ಎರಡನೇ ಅವಧಿಯ ಎರಡೂವರೆ ವರ್ಷದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ನಿಗದಿತ ಸಮಯದಲ್ಲಿ ಮೀಸಲಾತಿ ಪ್ರಕಟವಾಗದ ಹಿನ್ನಲೆಯಲ್ಲಿ ಹಾಲಿ ಅಧ್ಯಕ್ಷ ವಾಸುಪೂಜಾರಿಲೊರೆಟ್ಟೋ ಹಾಗೂ ಉಪಾಧ್ಯಕ್ಷ ಮೊನೀಶ್ ಆಲಿ ಮತ್ತು ಸದಸ್ಯರ ಅಧಿಕಾರವಧಿ ಒಂದುವರ್ಷ ನಾಲ್ಕು ತಿಂಗಳಿಗೆ ಮೊಟಕುಗೊಳ್ಳಲಿದೆ.

ಬಂಟ್ವಾಳ ಪುರಸಭೆಯ ಹಾಲಿ ಜನಪ್ರತಿನಿಧಿಗಳ ಆಡಳಿತಾವಧಿ ನ.7 ರಂದು ಕೊನೆಗೊಳ್ಳಲಿದ್ದರೆ, ರಾಜ್ಯದ ಕೆಲ ನಗರಸ್ಥಳೀಯಾಡಳಿತ ಸಂಸ್ಥೆಗಳ ಅವಧಿ ಒಂದರೆಡು ತಿಂಗಳು ಅಂತರದ ಮೊದಲು ಅಥವಾ ನಂತರ ಪೂರ್ಣಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಹಾಗಾಗಿ ಪುರಸಭೆಯ ಎರಡನೇ ಅವಧಿಯ ಎರಡೂವರೆ ವರ್ಷವನ್ನು ಕೂಡ ಪೂರ್ಣಗೊಳಿಸಲು ಅವಕಾಶ ಕಲ್ಪಿಸಬೇಕೆಂಬ ಕೂಗು ಇದೀಗ ರಾಜ್ಯದ 188 ನಗರ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳಿಂದ ಕೇಳಿಬಂದಿದ್ದು,ಆಯಾಯಾ ಜಿಲ್ಲೆಯ ನಗರಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ಪ್ರಸ್ತುತ ನಡೆಯುತ್ತಿರುವ ಮೇಲ್ಮನೆ ಹಾಗೂ ಕೆಳಮನೆಯ ಕಲಾಪದಲ್ಲಿ ಗಮನಸೆಳೆಯುವಂತೆ ಶಾಸಕರು,ವಿಧಾನಪರಿಷತ್ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಹಾಗೆ ಬಂಟ್ವಾಳ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅವರು  ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ,ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ವಿ.ಪ.ಸದಸ್ಯರಾದ ಮಂಜುನಾಥ ಭಂಡಾರಿ, ಐವಾನ್ ಡಿಸೋಜ ಅವರಿಗೆ ಲಿಖಿತ ಮನವಿ ಸಲ್ಲಿಸಿ ಶೂನ್ಯ ವೇಳೆ ಅಥವಾ ಯಾವುದೇ ಸಂದರ್ಭ ಸದನದ ಗಮನಸೆಳೆದು ಮೊಟಕುಗೊಳ್ಳಲಿರುವ ಜನಪ್ರತಿನಿಧಿಗಳ ಆಡಳಿತಾವಧಿಯನ್ನು ಪೂರ್ಣ ಅವಕಾಶ ಸಿಗುವ ನಿಟ್ಟಿನಲ್ಲಿ ಚರ್ಚಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.

ಅದೇರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮನವಿಯನ್ನು ಸಲ್ಲಿಸಿ ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article