ಗುಬ್ಬಚ್ಚಿಗೂಡು ಜಾಗೃತಿ
Friday, August 22, 2025
ಬಂಟ್ವಾಳ: ಗುಬ್ಬಚ್ಚಿಗೂಡು ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರ ಬಂಟ್ವಾಳ ತಾಲೂಕಿನ ಬಡಗ ಕಜೆಕಾರು ದ.ಕ.ಜಿ.ಪ.ಹಿ.ಪ್ರಾ ಶಾಲೆಯಲ್ಲಿ ನಡೆಯಿತು.
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರಿಸರದ ಉಳಿಯುವಿಕೆಯಲ್ಲಿ ಪಕ್ಷಿಗಳ ಅಳಿವು-ಉಳಿವು ನಿರ್ಧಾರವಾಗುತ್ತದೆ. ಪಕ್ಷಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಪ್ರಾತ್ಯಕ್ಷಿಕೆಯ ಮೂಲಕ ಕೃತಕ ಗೂಡು ಕಟ್ಟುವ ವಿಧಾನ ಹಾಗೂ ಮಣ್ಣಿನ ಪಾತ್ರೆಗಳಲ್ಲಿ ಪಕ್ಷಿಗಳಿಗೆ ನೀರು, ಆಹಾರ ಇಡುವ ಕ್ರಮ ಮತ್ತು ಅದರ ಮಹತ್ವವನ್ನು ಅವರು ವಿವರಿಸಿದರು.
ಶಾಲಾ ಪ್ರಭಾರ ಶಿಕ್ಷಕಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕರಾದ ಹರೀಶ್ ಮೂಲ್ಯ ವಂದಿಸಿದರು.