ಡೀಲರ್ ಶಿಪ್ ಕೊಡಿಸಿವುದಾಗಿ ಹೇಳಿ ಇಂಜಿನಿಯರ್‌ವೋರ್ವರಿಗೆ ಲಕ್ಷಾಂತರ ರೂ. ವಂಚನೆ
ಬಂಟ್ವಾಳದ ವಿಕ್ರಮ್ ಪ್ರಭು ಎಂಬವರು ವಂಚನೆಗೊಳಗಾಗಿದ್ದು, ಸುಮಾರು 17,60,810 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಮನೆಯಲ್ಲಿಯೇ ಇರುವ ವಿಕ್ರಮ್ ಪ್ರಭು ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಇಪ್ಕೋ ಕಂಪೆನಿಯ ಡೀಲರ್ ಶಿಪ್ ನೀಡುತ್ತೇವೆ. ಅರ್ಜಿಯನ್ನು ಭರ್ತಿಮಾಡಿ ಪಾನ್ ಕಾರ್ಡ್, ಬ್ಯಾಂಕ್ ವಿವರ ಹಾಗೂ ವೈಯಕ್ತಿಕ ದಾಖಲಾತಿಗಳನ್ನು ಕಳುಹಿಸುವಂತೆ ತಿಳಿಸಿದ್ದನೆನ್ನಲಾಗಿದೆ. ಅದರಂತೆ ಅರ್ಜಿ ನೋಂದಣಿ ಶುಲ್ಕ 35 ಸಾವಿರ ರೂ.ವನ್ನು ಕಳಿಸಿದ್ದು, ಬಳಿಕ ಹಂತ, ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 17,60,810 ಲಕ್ಷ ಹಣವನ್ನು ಪಾವತಿಸಿದ್ದರು.
ಇದಾದ ಬಳಿಕ ಅಪರಿಚಿತ ವ್ಯಕ್ತಿ ಆ.8 ರಂದು ಕರೆ ಮಾಡಿ ನಾವು ಬೆಂಗಳೂರಿಗೆ ಬಂದಿದ್ದು, ಆ.10 ರಂದು ಮಡಂತ್ಯಾರ್‌ಗೆ ಬರುವುದಾಗಿ ತಿಳಿಸಿದ್ದ. ಆ.11 ರಂದು ಅಪರಿಚಿನ ಮೊಬೈಲ್ ನಂಬರಿಗೆ ವಿಕ್ರಮ್ ಪ್ರಭು ಅವರು ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತಲ್ಲದೆ ಆತ ನೀಡಿದ್ದ ಟೋಲ್ ಪ್ರೀ ನಂಬರ್‌ಗೆ ಕರೆ ಮಾಡಿದಾಗ ನೆಟ್ ವರ್ಕ್ ಸಮಸ್ಯೆ ಇರಬಹುದು ನಾವು ಅವರಿಗೆ ತಿಳಿಸುತ್ತೇವೆ ಎಂದು ಹೇಳಿದ್ದರು. ನಂತರ ಅಪರಿಚಿತನ ಯಾವುದೇ ಕರೆ ಬಂದಿರುವುದಿಲ್ಲ ಸಾಕಷ್ಟು ಬಾರಿ ಕರೆ ಮಾಡಿದರೂ ಸ್ವಿಚ್ ಆಫ್ ಎಂದು ಬರುತ್ತಿದ್ದರಿಂದ ಸಂಶಯಗೊಂಡು ಬೇರೆಯವರಲ್ಲಿ ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.