ಸೆ.1 ರಂದು ಇಲಲ್ ಹಬೀಬ್ ಮೀಲಾದ್ ರ್‍ಯಾಲಿ

ಸೆ.1 ರಂದು ಇಲಲ್ ಹಬೀಬ್ ಮೀಲಾದ್ ರ್‍ಯಾಲಿ

ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್, ಮುಸ್ಲಿಂ ಜಮಾಅತ್ ದ.ಕ. ಜಿಲ್ಲಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಸ ಅ ರವರ 1500 ನೇ ಜನ್ಮ ದಿನಾಚರಣೆ ಪ್ರಯುಕ್ತ ಸೆ.1 ರಂದು ಇಲಲ್ ಹಬೀಬ್ ಮೀಲಾದ್ ರ್‍ಯಾಲಿ ಹಾಗೂ ಹುಬ್ಬುರ್ರಸೂಲ್ ಕಾನರೆನ್ಸ್ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಹಬ್ಬುರ್ರಸೂಲ್ ಕಾನರೆನ್ಸ್ ನಿರ್ವಹಣಾ ಸಮಿತಿ ಜನರಲ್ ಕ್ವನ್ವೀನರ್ ಹಾಫಿಳ್ ಯಾಕೂಬ್ ಸಆದಿ ನಾವೂರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನ 2.30ಕ್ಕೆ ಇಲಲ್ ಹಬೀಬ್ ಮೀಲಾದ್ ರ್‍ಯಾಲಿಯು ಪ್ರಾರಂಭವಾಗಲಿದ್ದು ಜ್ಯೋತಿ ವೃತ್ತದಿಂದ ಪುರಭವನ ತನಕ ನಡೆಯಲಿದೆ. ಹುಸೈನ್ ಮುಯೀನಿ ಮಾರ್ನಾಡ್ ಅವರು ರ್‍ಯಾಲಿಯ ಸಂದೇಶ ಭಾಷಣ ಮಾಡಲಿದ್ದು, ಇಲಲ್ ಹಬೀಬ್ ಮೀಲಾದ್ ಸಮಿತಿಯ ಚೇರ್‌ಮೆನ್ ಬಶೀರ್ ಹಾಜಿ ಬಿ.ಸಿ.ರೋಡು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮಂಗಳೂರು, ಸುರತ್ಕಲ್, ಉಳ್ಳಾಲ, ದೇರಳಕಟ್ಟೆ, ಮುಡಿಪು, ಬಂಟ್ವಾಳ, ಮೂಡುಬಿದಿರೆ, ತಲಪಾಡಿ ಸೇರಿದಂತೆ ೮ ವಲಯಗಳ ಎಸ್‌ಎಸ್‌ಎಫ್, ಎಸ್‌ವೈಎಸ್, ಮುಸ್ಲಿಂ ಜಮಾಅತ್ ಹಾಗೂ ಸುನ್ನೀ ಸಂಘಟನೆಗಳ ಕಾರ್ಯ ಕರ್ತರು, ವಿವಿಧ ದಫ್, ಸ್ಕೌಟ್ ತಂಡಗಳೊಂದಿಗೆ ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ 1500 ಮಂದಿಯನ್ನು ಸೇರಿಸಿ ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ನಡೆಯಲಿದ್ದು ಪ್ರಸಿದ್ಧ ಸೂಫೀ ಹಾಡುಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮಗ್ರಿಬ್ ನಮಾಝ್ ನಂತರ ಹುಬ್ಬುರ್ರಸೂಲ್ ಪ್ರಭಾಷಣ ನಡೆಯಲಿದ್ದು, ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಬಹು ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಲಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಬಹು ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಹುಬ್ಬುರ್ರಸೂಲ್ ಪ್ರಭಾಷಣ ನಡೆಸಲಿದ್ದಾರೆ. ಹುಬ್ಬುರ್ರಸೂಲ್ ಕಾನ್ಸರೆನ್ಸ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಡಾ| ಶೇಖ್ ಬಾವ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವಾರು ಸಾದಾತುಗಳು ಉಲಮಾಗಳು, ಹಾಗೂ ಉಮರಾಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಡಾ| ಶೇಖ್ ಬಾವ ಹಾಜಿ ಮಂಗಳೂರು, ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಮುಹಬೂಬ್ ಸಖಾಫಿ ಕಿನ್ಯ, ಇಸ್ಮಾಯಿಲ್ ಮಾಸ್ಟರ್, ಅಝ್ಮಲ್ ಕಾವೂರು, ಅಬ್ದುಲ್ ರಝಾಕ್ ಭಾರತ್ ಉಪಸ್ಥಿತರಿದ್ದರು.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article