ಕುತೂಹಲ ಮೂಡಿಸಿದ್ದ 13ನೇ ಸ್ಥಳದ ಎರಡನೇ ಭಾಗದಲ್ಲೂ ಇಲ್ಲ ಕಳೇಬರ ಕುರುಹು

ಕುತೂಹಲ ಮೂಡಿಸಿದ್ದ 13ನೇ ಸ್ಥಳದ ಎರಡನೇ ಭಾಗದಲ್ಲೂ ಇಲ್ಲ ಕಳೇಬರ ಕುರುಹು


ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ 13ನೇ ಸ್ಥಳದಲ್ಲಿ ಎರಡನೇ ದಿನವಾದ ಇಂದು ಶೋಧ ಕಾರ್ಯ ನಡೆಸಿ 18 ಅಡಿ ಗುಂಡಿ ತೋಡಿದರೂ ಕಳೇಬರದ ಅವಶೇಷಗಳು ಪತ್ತೆಯಾಗಿಲ್ಲ. 

12ನೇ ಸ್ಥಳದಲ್ಲಿ ನಡೆದ ಶೋಧ ಕಾರ್ಯಾಚರಣೆಯ ಬಳಿಕ 13ನೇ ಸ್ಥಳದಲ್ಲಿ ಅಗೆತ ನಡೆಸಿ ಶೋಧ ಕಾರ್ಯ ನಡೆಯಬೇಕಿತ್ತು, ಬದಲಿಗೆ ಕಲ್ಲೇರಿ, ಬೊಳಿಯಾರು ಕಾಡಿನಲ್ಲಿ ಶೋಧ ನಡೆದು  13ನೇ ಸ್ಥಳದ ಕುತೂಹಲ ಹೆಚ್ಚಿತ್ತು. ಇದೀಗ ಅನಾಮಿಕ ದೂರುದಾರ ಗುತುಸಿದ 13ನೇ ಸ್ಥಳ ಹಾಗೂ ಇಂದು 13ನೇ ಸ್ಥಳದ ಶೋಧ ಕಾರ್ಯ ಅಂತ್ಹಗೊಂಡಿದೆ. ಎಷ್ಟೇ ಅಗೆದರೂ ಕಳೇಬರದ ಕುರುಹು ಮಾತ್ರ ಪತ್ತೆಯಾಗಿಲ್ಲ. 

ಎರಡು ದಿನಗಳಲ್ಲಿ ಅತೀ ದೊಡ್ಡ ಗುಂಡಿ ಅಗೆದು ಕಾರ್ಯಾಚರಣೆ ನಡಸಲಾಗಿದೆ. 13ನೇ ಸ್ಥಳದ ಎರಡು ಭಾಗದಲ್ಲಿ 32 ಅಡಿ ಉದ್ದ, 28 ಅಗಲ ಹಾಗೂ 18 ಅಡಿ ಆಳಕ್ಕೆ ಅಗೆಯಲಾಗಿದೆ. 

ಮಳೆ ಅಡ್ಡಿ..

ಶೋಧ ಕಾರ್ಯಕ್ಕೆ ಮಳೆ ಅಡ್ಡಿಯಾಗಿ ಕಾರ್ಯಾಚರಣೆ ನಿಧನವಾಗಿ ನಡೆಯಿತು. ಮಳೆ ನೀರು ತುಂಬಿಕೊಳ್ಳುವ ಮೊದಲು ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ.

ನಾಳೆ ಏನು..?

ಧರ್ಮಸ್ಥಳದ ಕಾರ್ಯಾಚರಣೆಗೆ ಪರ, ವಿರೋಧಗಳು ವ್ಯಕ್ತವಾಗಿದೆ. ನೂರಾರು ಎಂದಿದ್ದ ಕಳೇಬರದ ಅವಶೇಷಗಳು ಸಿಕ್ಕಿದ್ದು ಬರೇ ಎರಡು. ಅದು ಪುರುಷರದ್ದು ಎನ್ನಲಾಗಿದೆ. ಅದರಲ್ಲೂ ಒಂದು ಒಂದೂವರೆ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಪುರುಷನದ್ದು ಎನ್ನಲಾಗಿದೆ. ಕಳೇಬರದ ಅವಶೇಷಗಳು ಸಿಗುತ್ತಿಲ್ಲ. ಆದ್ದರಿಂದ ಇದೀಗ ಇದೊಂದು ಷಡ್ಯಂತ್ರ ಎಂಬ ಅನುಮಾನಗಳು ಬಲವಾಗಿ, ಶೋಧ ಕಾರ್ಯಾಚರಣೆಗೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ. 

ನಿನ್ನೆ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯನವರು ಈ ಕುರಿತು ಚರ್ಚಿಸಿ 13ನೇ ಸ್ಥಳದಲ್ಲೂ ಕಳೇಬರ ಪತ್ತೆಯಾಗದಿದ್ದರೆ, ಶೋಧ ಕಾರ್ಯಾಚರಣೆ ನಿಲ್ಲಿಸುವ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಹೀಗಾಗಿ ಮುಸುಕುದಾರಿ ತೋರಿಸುವ ಹೊಸ ಜಾಗಗಳ ಶೋಧ ಕಾರ್ಯ ನಡೆಯುತ್ತೋ ಇಲ್ಲವೋ ಎಂಬ ಗೊಂದಲ ಮೂಡಿದೆ,.

ಗೃಹ ಸಚಿವರ ಭೇಟಿಯಾದ ಮೋಹಾಂತಿ..

ಎಸ್‌ಐಟಿ ತಂಡದ ಮುಖ್ಯಸ್ಥ ಪ್ರವಣ್ ಮೊಹಾಂತಿ ಗೃಹ ಸಚಿವ ಪರಮೇಶ್ವರ್ ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಎಸ್‌ಐಟಿ ಇದುವರಿಗಿನ ತನಿಖೆ, ಉತ್ಖನನ ಕಾರ್ಯಾಚರಣೆ, ಹೊಸ ದೂರು ದಾಖಲು ಸೇರಿದಂತೆ ಹಲವು ವಿಚಾರಗಳ ಕುರಿತು ಗೃಹ ಸಚಿವರು ಮಾಹಿತಿ ಪಡೆದಿದ್ದಾರೆ. ಬಳಿಕ ಗೃಹ ಸಚಿವರು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.

ಎಸ್‌ಐಟಿ ಮುಂದೆ..

ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಘಟನೆಯ ಬಗ್ಗೆ ಇಬ್ಬರು ಹೊಸ ದೂರುದಾರರು ಎಸ್.ಐ.ಟಿ. ಕಚೇರಿಗೆ ಆಗಮಿಸಿದ್ದಾರೆ.

ಈ ಹಿಂದೆಯೇ ದೂರು ನೀಡಿದ್ದ ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಪುರಂದರ ಗೌಡ ಹಾಗೂ ತುಲಾರಾಮ ಗೌಡ ಅವರು ಇಂದು ಮತ್ತೆ ಎಸ್.ಐ.ಟಿ ಕಚೇರಿಗೆ ಆಗಮಿಸಿದ್ದಾರೆ

ಎಸ್.ಐ.ಟಿ ಕಚೇರಿಗೆ ಆಗಮಿಸುವ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಪುರಂದರ ಗೌಡ, ನೇತ್ರಾವತಿ ಸ್ನಾನಘಟ್ಟದಲ್ಲಿ ನನ್ನ ಅಂಗಡಿಯಿತ್ತು. ಅಲ್ಲಿದ್ದ ವೇಳೆ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿದ್ದೇನೆ. ಇದೇ ವ್ಯಕ್ತಿ ಇರಬಹುದು ಅಂತ ಅನಿಸುತ್ತಿದೆ. ಒಂದಕ್ಕಿದ ಹೆಚ್ಚು ಜನರು ಸೇರಿ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿದ್ದೇವೆ. ಸಾಕ್ಷಿ ದೂರುದಾರ ತೋರಿಸಿದ ಒಂದನೆಯ ಸ್ಥಳದಲ್ಲಿ ಹಾಗೂ ೧೩ನೆಯ ಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕುವುದನ್ನು ನೋಡಿರುವುದಾಗಿ ತಿಳಿಸಿದ್ದಾರೆ.

ಮತ್ತೋರ್ವ ವ್ಯಕ್ತಿ ತಾನು ಸಾಕ್ಷಿದೂರುದಾರ ತೋರಿಸಿದ ಸ್ಥಳವಲ್ಲದೆ ಬೇರೆ ಸ್ಥಳಗಳಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದನ್ನು ನೋಡಿದ್ದು, ಈಬಗ್ಗೆ ಎಸ್.ಐ.ಟಿ ಮುಂದೆ ಹೆಚ್ಚಿನ ಮಾಹಿತಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ.

ಮಂಪರು ಪರೀಕ್ಷೆ..?

ಅನಾಮಿಕ ದೂರುದಾರ ತಿಳಿಸಿದಂತೆ  ಅವಶೇಷದ ಯಾವುದೇ ಕುರುಹು ಸಿಕ್ಕಿಲ್ಲ. ಹೀಗಾಗಿ ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article