ಎನ್ ಸಿಸಿ ಮಹಾ ನಿರ್ದೇಶಕರ ಭೇಟಿ

ಎನ್ ಸಿಸಿ ಮಹಾ ನಿರ್ದೇಶಕರ ಭೇಟಿ


ಮಂಗಳೂರು: ನಮ್ಮಲ್ಲಿ ಉತ್ತಮ ಸೌಲಭ್ಯಗಳಿವೆ ಪಿಲಿಕುಳದ   ಸ್ಕೌಟ್ಸ್ ಮತ್ತು ಗೈಡ್ಸ್ ಭವನವು ವ್ಯವಸ್ಥಿತವಾಗಿದ್ದು ಎನ್ ಸಿಸಿ ವಿದ್ಯಾರ್ಥಿಗಳಿಗೆ ಸದುಪಯೋಗ ಪಡಿಸಿಕೊಳ್ಳಲು ಉತ್ತಮ  ಅವಕಾಶ ಎಂದು ಎನ್ ಸಿಸಿ ಕರ್ನಾಟಕ ವಿಭಾಗದ  ಮಹಾನಿರ್ದೇಶಕ ಜಿ ಅರುಣ್ ಕುಮಾರ್ ಹೇಳಿದರು.

ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಭವನ ದಲ್ಲಿ ನಡೆದ ಎನ್ ಸಿಸಿ ವಾರ್ಷಿಕ ತರಬೇತಿ ಶಿಬಿರದಲ್ಲಿ ಅವರು ಎನ್ ಸಿಸಿ ವಿದ್ಯಾರ್ಥಿ ಗಳನ್ನೂದ್ದೇಶಿಸಿ ಮಾತನಾಡಿದರು.


ಎನ್ ಸಿಸಿ ಕರ್ನಾಟಕ ವಿಭಾಗದಲ್ಲಿ ತಂಡವನ್ನು ಬಲಪಡಿಸುವಲ್ಲಿ ನಾವು ಶ್ರಮಿಸಬೇಕು. ಕರ್ನಾಟಕ ಎನ್ ಸಿಸಿ ನೌಕಾದಳವು ಉತ್ತಮ ಉಪಕರಣ ಗಳನ್ನು ಹೊಂದಿದೆ. ತರಬೇತಿಗೆ ಬೇಕಾದ ಹಲವು ಉಪಕರಣಗಳು ವಿದ್ಯಾರ್ಥಿಗಳಿಗೆ ತರಬೇತಿ ಪಡೆಯಲು  ಸಹಕರಿಯಾಗಿದೆ. ಇದನ್ನು ಎನ್ ಸಿಸಿ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ತಂಡವನ್ನು ಶಕ್ತಿಯುತ ತಂಡವಾಗಿ ನಿರ್ಮಿಸಬೇಕು. 

ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಭವನವು ಅತ್ಯಾಧುನಿಕ ರೀತಿಯಲ್ಲಿ ನಿರ್ಮಾಣವಾಗಿದ್ದು ಇದು ಎನ್ ಸಿಸಿ ವಿದ್ಯಾರ್ಥಿಗಳಿಗೆ ಉತ್ತಮ ಕೊಡುಗೆ ಎಂದರು. 

ಈ ಭವನದ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಉತ್ತೇಜಿಸಿದರು.

ಎನ್ ಸಿಸಿ ಕ್ಯಾಡೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಅವರು ಶುಭಾಶಯಗಳನ್ನು ತಿಳಿಸಿದರು.

ಎನ್ ಸಿಸಿ ಗ್ರೂಪ್ ಕಮಾಂಡ್ ಕರ್ನಲ್ ವಿರಾಜ್ ಕಾಮತ್ ಮಾತನಾಡಿ ಕರ್ಣಾಟಕ ರಾಜ್ಯದ ಎನ್ ಸಿಸಿ ತಂಡ ರಚನೆಗಾಗಿ 36 ಕಾಡೆಟ್ ಗಳನ್ನು ಈ ಶಿಬಿರದಲ್ಲಿ ಆಯ್ಕೆ ಮಾಡಲಾಗುತ್ತಿದ್ದು ಇವರು ಮುಂಬರುವ ದಿನಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article