
ನೀಕೆ೯ರೆ ಶಾಲೆಯಲ್ಲಿ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ
Wednesday, August 13, 2025
ಮೂಡುಬಿದಿರೆ: ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯ ರಾಶಿಗಳ ಮಹತ್ವ ಮತ್ತು ಜಾಗೃತಿ ಕುರಿತು ಗುಬ್ಬಚ್ಚಿಗೂಡು ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀರ್ಕೆರೆ ಇಲ್ಲಿ ಬುಧವಾರ ಕಾರ್ಯಾಗಾರ ನಡೆಯಿತು.
ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪಕ್ಷಿಗಳ ಅಳಿವು ಉಳಿವು ನಮ್ಮ ಕೈಯಲ್ಲಿದೆ ಅಂದರು. ಪ್ರಾತ್ಯಕ್ಷಿಕೆಯನ್ನು ನಡೆಸಿ ಪಕ್ಷಿಗಳಿಗೆ ಕೃತಕ ಗೂಡು ಕಟ್ಟುವ ವಿಧಾನ, ಹಾಗೂ ನೀರು ಆಹಾರ ಇಡುವ ಕ್ರಮವನ್ನು ವಿವರಿಸಿದರು.
ಮುಖ್ಯ ಶಿಕ್ಷಕಿ ಯಮುನ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಇದು ಗುಬ್ಬಚ್ಚಿಗೂಡಿನಿಂದ ಉಚಿತವಾಗಿ ನಡೆದ 316 ನೇ ಕಾರ್ಯಾಗಾರವಾಗಿದೆ.