ಚಿನ್ನಯ್ಯನಿಗೆ ರಕ್ಷಣೆ ನೀಡಿ: ಪ್ರಸನ್ನ ರವಿ
Saturday, August 30, 2025
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಬಂಧಿತನಾಗಿರುವ ಚಿನ್ನಯ್ಯನಿಗೆ ರಕ್ಷಣೆ ಒದಗಿಸುವಂತೆ ಕೋರಿ ಹೋರಾಟಗಾರ್ತಿ ಮಂಗಳೂರಿನ ಪ್ರಸನ್ನರವಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿ ಶನಿವಾರ ಮನವಿ ಮಾಡಿದ್ದಾರೆ.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೌಜನ್ಯ ಪ್ರಕರಣ ಸಂಬಂಧಿಸಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಅವನು ಸೌಜನ್ಯ ಕೇಸ್ನಲ್ಲಿ ಓರ್ವ ಸಾಕ್ಷಿಯಾಗಿರುವ ಸಾಧ್ಯತೆ ಇದೆ. ಈಗಾಗಲೇ ಸೌಜನ್ಯ ಸಾಕ್ಷಿ ಎನಿಸಿಕೊಂಡ ಹಲವರು ನಿಗೂಢ ಸಾವಿಗೀಡಾಗಿದ್ದಾರೆ. ಹಾಗಾಗಿ ಚಿನ್ನಯ್ಯನನ್ನು ಎಸ್ಐಟಿ ತಮ್ಮ ವಶದಲ್ಲೇ ಉಳಿಸಿಕೊಳ್ಳಬೇಕು. ಆತನನ್ನು ಸೌಜನ್ಯ ಪ್ರಕರಣದಲ್ಲಿ ವಿಚಾರಣೆ ನಡೆಸಬೇಕು. ಇಲ್ಲದಿದ್ದರೆ ಆತನ ಪ್ರಾಣಕ್ಕೆ ಅಪಾಯ ಬರಬಹುದು. ಸೌಜನ್ಯ ಪ್ರಕರಣ ಹಾಗೂ ಬುರುಡೆ ಪ್ರಕರಣಕ್ಕೆ ಸಂಬಂಧ ಇಲ್ಲ. ಸೌಜನ್ಯ ತಾಯಿ ಅವಹೇಳನ ವಿರುದ್ಧವೂ ಬೆಳ್ತಂಗಡಿ ಠಾಣೆಗೆ ದೂರು ನೀಡುತ್ತೇವೆ ಎಂದರು.