ರಾಮಕೃಷ್ಣ ಆಶ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ
ಮಂಗಳೂರು: ಕಿರಣ್ ಗೇಮ್ಸ್ ಟೀಮ್ (ರಿ.) ಮಾರ್ನಮಿಕಟ್ಟೆ ಇದರ ೫೫ನೇ ವಾರ್ಷಿಕೋತ್ಸವದ ಅಂಗವಾಗಿ ರಾಮಕೃಷ್ಣ ಮಿಷನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ರಥಬೀದಿ, ಮಂಗಳೂರು ಮತ್ತು ಮಹಾರಾಣ ಪ್ರತಾಪ್ ಸ್ಪೋರ್ಟ್ಸ್ ಕ್ಲಬ್, ಮಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ಮತ್ತು ಕೆಎಸ್ ಹೆಗ್ಡೆ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಖ್ಯಾತ ತಜ್ಞ ವೈದ್ಯರುಗಳ ಉಪಸ್ಥಿತಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಆ.31 ರಂದು ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ರಾಮಕೃಷ್ಣ ಆಶ್ರಮದಲ್ಲಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ನಡೆಯಲಿದೆ.
ಶಿಬಿರದಲ್ಲಿ ಮಂಗಳೂರಿನ ಖ್ಯಾತ ತಜ್ಞ ವೈದ್ಯರುಗಳು ಉಪಸ್ಥಿತರಿದ್ದು, ಶ್ವಾಸಕೋಶ, ಸಕ್ಕರೆ ಖಾಯಿಲೆ, ಲಿವರ್, ಉಬ್ಬಸ, ಜ್ವರ, ಥೈರಾಯಿಡ್ ತಜ್ಞರಾದ ಡಾ. ಚಕ್ರಪಾಣಿ ಎಂ. ಹಾಗೂ ಡಾ. ಬಿ. ದೇವದಾಸ್ ರೈ, ಹೃದಯ ಸಂಬಂಧಿತ ಖಾಯಿಲೆಗಳ ತಜ್ಞರಾದ ಡಾ. ಪದ್ಮನಾಭ ಕಾಮತ್, ಕಿವಿ, ಮೂಗು, ಗಂಟಲು ತಜ್ಞರಾದ ಡಾ. ವಿಜಯೇಂದ್ರ ಶೆಣೈ, ಮೂತ್ರಪಿಂಡ, ಕಿಡ್ನಿ ಸಮಸ್ಯೆ ತಜ್ಞರಾದ ಡಾ. ಭೂಷಣ್ ಶೆಟ್ಟಿ, ಬೆನ್ನು ನೋವು, ಗಂಟು, ಮಂಡಿನೋವು, ಸಂಧಿವಾತ ತಜ್ಞರಾದ ಡಾ. ದೀಪಕ್ ಹೆಗ್ಡೆ, ನೇತ್ರ ಪರೀಕ್ಷೆ, ಕಣ್ಣಿನ ಪೊರೆ ಹಾಗೂ ಇತರ ಚಿಕಿತ್ಸೆ ತಜ್ಞರಾದ ಡಾ. ಕೀರ್ತನ್ ರಾವ್, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ವೀಣ ಆರ್. ಭಟ್, ವೈದ್ಯಕೀಯ ಚಿಕಿತ್ಸೆ ತಜ್ಞರಾದ ಡಾ. ಪ್ರಜೀತ್ ಹೆಗ್ಡೆ ಭಾಗವಹಿಸಲಿರುವರು.
ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜೀ ದೀಪ ಪ್ರಜ್ವಲನೆಗೈಯಲ್ಲಿದ್ದು, ಶಿಬಿರದ ಉದ್ಘಾಟನೆಯನ್ನು ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ನ ಅಧಕ್ಷ ಡಾ. ಎಂ. ಮೋಹನ್ ಆಳ್ವ ಮಾಡಲಿರುವರು. ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಎಂ. ಸಭಾಧ್ಯಕ್ಷತೆಯನ್ನು ವಹಿಸಲಿದ್ದು ಮುಖ್ಯ ಅಥಿತಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ನಗರ ದಕ್ಷಿಣದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರಿನ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮುಕ್ತೇಸರ ಎಂ. ಅರುಣ್ ಐತಾಳ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಚಲನಚಿತ್ರ ನಟ ರೂಪೇಶ್ ಶೆಟ್ಟಿ, ವಿಶ್ವಕರ್ಮ ಸಹಕಾರಿ ಬ್ಯಾಂಕ್ ಲಿ. ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ, ವಕೀಲ ರಾಘವೇಂದ್ರ ರಾವ್ ಉಪಸ್ಥಿತರಿರುವರು ಎಂದು ಕಿರಣ್ ಗೇಮ್ಸ್ ಟೀಮಿನ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.