ಎರಿಕ್ ಒಝಾರಿಯೊ ನಿಧನಕ್ಕೆ ಜನಪರ ಸಂಘಟನೆಗಳ ಸಂತಾಪ
ಮಂಗಳೂರು: ಕೊಂಕಣಿ ಸಾಂಸ್ಕೃತಿಕ ಲೋಕದ ದಿಗ್ಗಜ, ಮಾಂಡ್ ಸೊಭಾಣ್ ಗುರಿಕಾರ್ ಎರಿಕ್ ಒಝಾರಿಯೊ ಜನಪರ ಚಳವಳಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ತನ್ನ ಸಾರ್ವಜನಿಕ ಜೀವನವನ್ನು ಟ್ರೇಡ್ ಯೂನಿಯನ್ ಮೂಲಕ ಆರಂಭಿಸಿದ ಎರಿಕ್ ಅವರು ಮಂಗಳೂರಿನಲ್ಲಿ ಮಹತ್ವದ ಹಲವು ಹೋರಾಟಗಳಿಗೆ ನೇತೃತ್ವ ನೀಡಿದ್ದರು.
ಅವರ ಅಗಲಿಕೆ ಮಂಗಳೂರಿನ ಸಾಂಸ್ಕೃತಿಕ ಲೋಕ ಹಾಗೂ ಜನಪರ ಚಳವಳಿಗೆ ದೊಡ್ಡ ನಷ್ಟ ಉಂಟು ಮಾಡಿದೆ ಎಂದು ಎಂದು ಮಂಗಳೂರಿನ ಜನಪರ ಸಂಘಟನೆಗಳ ಪ್ರಮುಖರಾದ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಪ್ರಾಂತ ರೈತ ಸಂಘದ ಕೆ ಯಾದವ ಶೆಟ್ಟಿ, ಪ್ರಗತಿಪರ ಚಿಂತಕರ ವೇದಿಕೆಯ ಡಾ. ಕೃಷ್ಣಪ್ಪ ಕೊಂಚಾಡಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಮುದಾಯದ ವಾಸುದೇವ ಉಚ್ಚಿಲ, ದಲಿತ ಸಂಘರ್ಷ ಸಮಿತಿಯ ಎಂ ದೇವದಾಸ್, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಯಶವಂತ ಮರೋಳಿ, ಎಸ್ಎಫ್ಐ ನ ಜಿಲ್ಲಾ ಕಾರ್ಯದರ್ಶಿ ವಿನುಶ ರಮಣ ಹೊರಡಿಸಿದ ಜಂಟಿ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.