ಎರಿಕ್ ಒಝಾರಿಯೋರವರಿಗೆ ಸಮುದಾಯ ಕರ್ನಾಟಕದ ಭಾವಪೂರ್ಣ ಶ್ರದ್ಧಾಂಜಲಿ
Friday, August 29, 2025
ಮಂಗಳೂರು: ಕೊಂಕಣೆ, ಕನ್ನಡ, ತುಳು ರಂಗಭೂಮಿಯ ಪ್ರೋತ್ಸಾಹಕ ಕೊಂಕಣೆ ಸಾಹಿತ್ಯ ಮತ್ತು ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆ ನಿಡಿದ ಎರಿಕ್ ಒಝಾರಿಯೋ ನಮ್ಮನ್ನಗಲಿದ್ದು ಇವರ ಅಗಲುವಿಕೆಯಿಂದ ಜನಪರ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಕೊಂಕಣೆ ರಂಗಭೂಮಿಯಲ್ಲಿ ಜನಪರತೆಯನ್ನು ಬಯಸುತ್ತಾ ಕೊಂಕಣೆ ಭಾಷಿಕರೆಲ್ಲರನ್ನೂ ಒಂದೇ ಸೂರಿನಡಿಗೆ ತರುವಲ್ಲಿ ಅಪಾರವಾಗಿ ಶ್ರಮಿಸಿ ಕಲಾಂಗಣ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸಂಘಟಕ ಕೊಂಕಣೆಯ ವಿಶಿಷ್ಟ ಹಾಡುಗಾರ ಮತ್ತು ಸಂಗೀತ ನಿರ್ದೇಶಕ ಎರಿಕ್ ಒಝಾರಿಯೊರವರಿಗೆ ಸಮುದಾಯ ಕರ್ನಾಟಕವು ಭಾವಪೂರ್ಣ ಶ್ರಧಾಂಜಲಿಯನ್ನು ಸಲ್ಲಿಸುತ್ತದೆ ಎಂದು ಸಮುದಾಯ ಕರ್ನಾಟಕದ ಕಾರ್ಯದರ್ಶಿ ಮನೋಜ್ ವಾಮಂಜೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ