ಇನ್ಸ್ಟಾ ಗ್ರಾಂ ಖಾತೆಯಲ್ಲಿ ಸುಳ್ಳು ಸಂದೇಶ: ಪ್ರಕರಣ ದಾಖಲು

ಇನ್ಸ್ಟಾ ಗ್ರಾಂ ಖಾತೆಯಲ್ಲಿ ಸುಳ್ಳು ಸಂದೇಶ: ಪ್ರಕರಣ ದಾಖಲು

ಮಂಗಳೂರು: ಪುತ್ತೂರಿನ ಸೈಂಟ್ ಪಿಲೋಮಿನಾ ಕಾಲೇಜಿನಲ್ಲಿ ಆ.19 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ನೃತ್ಯದಲ್ಲಿ ಒಂದು ಸಮುದಾಯದ ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಆ ವ್ಯಕ್ತಿಯು ಆಕ್ಷೇಪ ವ್ಯಕ್ತಪಡಿಸಿ, ಧರ್ಮಗಳ ನಡುವೆ ವೈಮನಸ್ಸು ಉಂಟುಮಾಡಿದ್ದು, ಸುಳ್ಳು ಮಾಹಿತಿ ಸಂದೇಶ ಹರಡಿ ಬೆದರಿಕೆ ಹಾಕಿದ ವಿರುದ್ಧ ಪ್ರಕರಣ ದಾಖಲಾಗಿದೆ.

ಪುತ್ತೂರಿನ ಸೈಂಟ್ ಪಿಲೋಮಿನಾ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಜೋನ್ಸನ್ ಡೇವಿಡ್ ಸೀಕ್ವೆರ (35) ಅವರು ನೀಡಿದ ದೂರಿನಲ್ಲಿ ಆ.29 ರಂದು ತನ್ನ ಮೊಬೈಲ್‌ನಲ್ಲಿ ಇನ್ಸ್ಟಾ ಗ್ರಾಮ್ ಖಾತೆಯನ್ನು ಪರಿಶೀಲಿಸುತ್ತಿರುವಾಗ, @ಟಿಎಂ_ಬ್ಯಾಡ್_ಕರ್ಮ_990 ಎಂಬ ಇನ್ಸ್ಟಾ ಗ್ರಾಮ್ ಖಾತೆಯನ್ನು ಬಳಸುತ್ತಿರುವ ಆ ವ್ಯಕ್ತಿಯು ಕಾಲೇಜಿನಲ್ಗಲಿ ಆ.19 ರಂದು ನಡೆದ ನೃತ್ಯ ಕಾರ್ಯಕ್ರಮದಲ್ಲಿ, ಒಂದು ನಿರ್ಧಿಷ್ಟ ಸಮುದಾಯದ ವಿಧ್ಯಾರ್ಥಿನಿಯರು ಭಾಗವಹಿಸಿರುವುದರ ಬಗ್ಗೆ ಅಕ್ಷೇಪ ವ್ಯಕ್ತಪಡಿಸುತ್ತಾ, ಧರ್ಮದ ಆಧಾರದಲ್ಲಿ ವಿವಿಧ ಧರ್ಮಗಳ ನಡುವೆ ವೈಮನಸ್ಸನ್ನು ಉಂಟಾಗುವಂತಹ ಹಾಗೂ ಸುಳ್ಳು ಮಾಹಿತಿ ಹೊಂದಿರುವ ಸಂದೇಶವನ್ನು ಹಾಕಿರುವುದಲ್ಲದೇ, ಸದ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿರುವುದು ಕಂಡು ಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:77/2025, ಕಲಂ: 196(1)(a)(b)  351(2),352  BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.


Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article