ಮಹಿಳೆಯ ಅನುಮಾನಾಸ್ಪದ ಸಾವು: ಪ್ರಕರಣ ದಾಖಲು
ಮಂಗಳೂರು: ಬೆಳ್ತಂಗಡಿ ಉಜಿರೆಯಲ್ಲಿರುವ ವಸತಿಗೃಹದಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆ ಚಿಕ್ಕಮಗಳೂರು ನಿವಾಸಿ ಭಾಗ್ಯ ಎಂಬುದಾಗಿ ತಿಳಿದುಬಂದಿದೆ.
ಪ್ರಕರಣದ ವಿವರ:
ದೂರುದಾರರಾದ ರಾಜು ಎಂಬವರು ಬೆಳ್ತಂಗಡಿ ಉಜಿರೆಯಲ್ಲಿರುವ ವಸತಿಗೃಹದಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 01-03-2014 ರಂದು ಮದ್ಯಾಹ್ನ ವೇಳೆ, ಪ್ರಕರಣ ಆರೊಪಿ ಬಾಳಪ್ಪ ಎಂ ಕಳ್ಳೊಳ್ಳಿ ಎಂಬಾತನು ಓರ್ವ ಮಹಿಳೆಯೊಂದಿಗೆ ಬಂದು ವಸತಿಗೃಹದಲ್ಲಿ ರೂಂ ಪಡೆದುಕೊಂಡಿರುತ್ತಾನೆ. ಆ ದಿನ ರಾತ್ರಿ ವೇಳೆ ಸದ್ರಿ ರೂಂ ಬಳಿ ಹೋಗಿ ನೋಡಲಾಗಿ ಆರೋಪಿಯೊಂದಿಗೆ ರೂಂನಲ್ಲಿ ತಂಗಿದ್ದ ಮಹಿಳೆಯು ಬಾತ್ ರೂಂನಲ್ಲಿ ಅರೆನಗ್ನಳಾಗಿ ಮೃತಪಟ್ಟು ಬಿದ್ದುಕೊಂಡಿದ್ದು, ಆಕೆಯ ಜೊತೆಗಿದ್ದ ಆರೋಪಿಯು ಆಕೆಯನ್ನು ಯಾವುದೋ ಕಾರಣ ಮತ್ತು ಉದ್ದೇಶದಿಂದ ಕೊಲೆಮಾಡಿ ಕೊಠಡಿಯ ಬಾಗಿಲನ್ನು ಹೊರಗಡೆಯಿಂದ ಚಿಲಕ ಹಾಕಿ ಪರಾರಿಯಾಗಿರುವುದು ಕಂಡುಬಂದಿರುತ್ತದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 126/2014, ಕಲಂ 302.201 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.