ರಮೇಶ್ ವಾಸು ಶೇರಿಗಾರ ಅವರಿಗೆ ನುಡಿನಮನ

ರಮೇಶ್ ವಾಸು ಶೇರಿಗಾರ ಅವರಿಗೆ ನುಡಿನಮನ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಮಾತೃ ಸಂಘ (ರಿ) ಅತ್ತಾವರ ಮಂಗಳೂರು ಇದರ ನೇತೃತ್ವದಲ್ಲಿ ಮತ್ತು ಸಹ ಸಂಘಟನೆಗಳ ಸಹಭಾಗಿತ್ವದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ದಿವಂಗತ ರಮೇಶ್ ವಾಸು ಶೇರಿಗಾರ ಅವರ ನುಡಿನಮನ ಕಾರ್ಯಕ್ರಮವು ಅವರ ಕಾರ್ಯಕ್ಷೇತ್ರವಾಗಿದ್ದ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಿಠ್ಠಪ್ಪ ಸ್ಮಾರಕ ಸಭಾಭವನದಲ್ಲಿ ಆ.21 ರಂದು ನಡೆಯಿತು.

ಮೃತರ ಆತ್ಮೀಯ ಒಡನಾಡಿಯಾಗಿದ್ದ ಭಾ.ಜ.ಪ. ಜಿಲ್ಲಾ ವಕ್ತಾರ ರಾಜಗೋಪಾಲ್ ರೈ ಅವರು ಮಾತನಾಡಿ, ದಿವಂಗತರ ರಾಮಸೇತು ಆಂದೋಲನ ಹಾಗೂ ತುಳು ಆಯನದ ಬಗ್ಗೆ ಅವರ ಅವಿರತ ಶ್ರಮವನ್ನು ವಿವರಿಸಿದರು. 

ಪ್ರಮುಖರಾದ ಕೃಷ್ಣಪ್ಪ ಗಾಣಿಗ, ನಾಗೇಶ್ ಕಲ್ಲಡ್ಕ, ಪ್ರಕಾಶ್ .ಎಚ್, ಹರಿ ರಾಮಚಂದ್ರ, ದೇವಪ್ಪ ಸಪಲಿಗ, ರಾಮ ಮುಗ್ರೋಡಿ, ಕಮಲಾಕ್ಷ ಮಂಜೇಶ್ವರ, ಶೈಲೇಶ್ ವಿ. ಶೆಟ್ಟಿ, ದಯಾನಂದ ಬಂಗೇರ, ನಾರಾಯಣ ಪುತ್ರನ್, ನಾರಾಯಣ ಕಣ್ಣೂರು, ಬಾಲಕೃಷ್ಣ ಸೆರ್ಕಲ, ಶಾಲಿನಿ ಮತ್ತಿತರರು ವಿವಿಧ ಸಂಘಟನೆಗಳ ಪರವಾಗಿ ನುಡಿನಮನ ಸಲ್ಲಿಸಿದರು.

ದ.ಕ. ಜಿಲ್ಲಾ ಗಾಣಿಗರ ಸಂಘ, ಶ್ರೀ ಉಮಾಮಹೇಶ್ವರ ಕ್ಷೇತ್ರ, ದಿ ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅತ್ತಾವರ, ಬ್ಯಾರಿಸ್ಟರ್ ಅತ್ತಾವರ ಎಲ್ಲಪ್ಪ ಟ್ರಸ್ಟ್  ಇವುಗಳ ಪರವಾಗಿ ರವಿ ಒಡೆಯೂರು ನುಡಿ ನಮನ ಸಲ್ಲಿಸಿ, ನಿರಂತರ ತ್ಯಾಗದಿಂದ ದಿವಂಗತರು ಅಮೃತ ತತ್ವವನ್ನು ಪಡೆದಿರುವರು ಎಂದು ಹೇಳಿದರು.

ಪ್ರಮುಖರಾದ ಜನಾರ್ಧನ್ ಆರ್ಕುಳ, ತಾರನಾಥ ಸುವರ್ಣ, ಎ.ಎಸ್. ವೆಂಕಟೇಶ್, ಪ್ರಕಾಶ್ ಪಡೀಲ್, ಕೇಶವ ಮಳಲಿ, ಜಗದೀಶ್ ಕುಂದರ್ ಉಪಸ್ಥಿತರಿದ್ದರು.

ಪ್ರಸಾದ್ ಕಣ್ಣೂರ್ ಅವರು ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article