
ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಲಕ್ಷತುಳಸೀ ಅರ್ಚನೆ
Tuesday, August 12, 2025
ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆ.15 ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಆ.16 ರಂದು ಶ್ರೀದೇವರಿಗೆ ಲಕ್ಷ ತುಳಸೀ ಅರ್ಚನೆ ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಮಾರ್ಗದರ್ಶನದೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯಂದು ಪ್ರಾತಃಕಾಲ ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ಹವನ, ಬೆಳಗ್ಗಿನ ಮಹಾಪೂಜೆ, ಭಜನಾ ನಾಮಸಂಕೀರ್ತನೆ, ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ ಶ್ರೀ ರುದ್ರ ಸಮಿತಿ ಮಂಗಳೂರು ಇವರಿಂದ ವಿಷ್ಣು ಸಹಸ್ರನಾಮ ಪಠಣ ಹಾಗೂ ಭಗವದ್ಗೀತಾ ಪಾರಾಯಣ, ರಾತ್ರಿ ಭಜನಾ ನಾಮ ಸಂಕೀರ್ತನೆ, ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ, ಶ್ರೀ ಗೋಪಾಲಕೃಷ್ಣ ದೇವರಿಗೆ ಅರ್ಘ್ಯಪ್ರಧಾನ ಪ್ರಸಾದ ವಿತರಣೆ, ಉಪಹಾರ ನಡೆಯಲಿದೆ.
ಆ.16 ರಂದು ಪ್ರಾಥಃಕಾಲ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಗಣಪತಿ ಹವನ, ಬೆಳಗ್ಗಿನ ಮಹಾಪೂಜೆ, ಲಕ್ಷ ತುಳಸೀ ಅರ್ಚನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ. ಲಕ್ಷತುಳಸೀ ಅರ್ಚನೆಗೆ ಅಧಿಕವಾದ ತುಳಸಿಯ ಅವಶ್ಯಕತೆಯಿದೆ. ಅಗತ್ಯವಿರುವ ತುಳಸಿಯನ್ನು 14ರ ಮದ್ಯಾಹ್ನದ ಮೊದಲಾಗಿ ದೇವಳಕ್ಕೆ ಅರ್ಪಿಸಬಹುದಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.