ಸಾಮೂಹಿಕ ಶಿವಪಂಚಾಕ್ಷರಿ ಓಂ ನಮಃ ಶಿವಾಯ ನಾಮ ಜಪ ಪಠನೆ
Monday, August 18, 2025
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಷಡ್ಯಂತ್ರದ ಅಪಪ್ರಚಾರ ಕೊನೆಯಾಗಿ ಕ್ಷೇತ್ರದ ಶ್ರದ್ದೆ, ಭಕ್ತಿ ಹೆಚ್ಚಿ ಶಾಂತಿ ನೆಲೆಸಲು ಸಾಮೂಹಿಕ ಶಿವಪಂಚಾಕ್ಷರಿ ಓಂ ನಮಃ ಶಿವಾಯ ನಾಮ ಜಪ ಪಠಿಸಲು ವಿಶ್ವ ಹಿಂದೂ ಪರಿಷದ್ ಕರೆ ನೀಡಿದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಮಂಗಳೂರು ಜಿಲ್ಲಾ ವತಿಯಿಂದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಬೆಳಗ್ಗೆ ಶ್ರೀ ದೇವರ ಬಳಿ ಸಂಕಲ್ಪ ಹಾಗೂ ಶಿವ ಪಂಚಾಕ್ಷರಿ ಜಪ ನಡೆಯಿತು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಾಂತ ಪ್ರಮುಖರಾದ ಡಾ. ಎಂ.ಬಿ. ಪುರಾಣಿಕ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳ ಮೇಲೆ ನಡೆಯುವಂತಹ ಷಡ್ಯಂತ್ರದ ಅಪಚಾರವನ್ನು ಸಹಿಸಲು ಸಾಧ್ಯವಿಲ್ಲ, ಅದಕ್ಕೋಸ್ಕರ ಶ್ರೀ ದೇವರ ಮೊರೆ ಹೋಗಿದ್ದೇವೆ, ಶ್ರೀದೇವರ ಕೃಪೆಯಿಂದ ಕ್ಷೇತ್ರಕ್ಕೆ ಬಂದಿರುವಂತಹ ಎಲ್ಲಾ ಕಲಂಕಗಳು ದೂರವಾಗಿ ಸದ್ಯಕ್ಕೆ ಶ್ರದ್ಧೆ ಹೆಚ್ಚಲಿ ಶಾಂತಿ ನೆಲೆಸಲಿ ಎಂದರು.
ಓಂ ಶ್ರೀ ಮಠದ ಶ್ರೀಗಳು, ಕಟೀಲು ದೇವಸ್ಥಾನದ ಅನುವಂಶೀಯ ಮೊಕ್ತೇಸರ ಹರಿದಾಸ ಅಸರಣ್ಣ, ವಿಶ್ವ ಹಿಂದೂ ಪರಿಷತ್ ಪ್ರಾಂತ ಪ್ರಾಂತ ಪ್ರಮುಖ ಶರಣ್ ಪಂಪುವೆಲ್, ಗೋಪಾಲ್ ಕುತ್ತಾರ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ವಿಭಾಗ ಪ್ರಮುಖರಾದ ಪೊಳಲಿ ಗಿರಿಪ್ರಕಾಶ ತಂತ್ರಿ, ಶಿವಾನಂದ ಮೆಂಡನ್, ಸಂಘ ಮತ್ತು ವಿವಿಧ ಕ್ಷೇತ್ರಗಳ ಪ್ರಮುಖರು ಉಪಸ್ಥಿತರಿದ್ದರು.