ಏಳು ಪಟ್ಟಣ ಮೊಗವೀರ ಸಭಾ: ಕದ್ರಿಯಲ್ಲಿ ಸಿಯಾಳ ಅಭಿಷೇಕ

ಏಳು ಪಟ್ಟಣ ಮೊಗವೀರ ಸಭಾ: ಕದ್ರಿಯಲ್ಲಿ ಸಿಯಾಳ ಅಭಿಷೇಕ


ಮಂಗಳೂರು: ಇಲ್ಲಿನ ಏಳು ಪಟ್ಟಣ ಮೊಗವೀರ ಸಂಯುಕ್ತ ಸಭಾದ ವತಿಯಿಂದ ಶ್ರಾವಣ ಮಾಸದ ಪ್ರಥಮ ಸೋಮವಾರ ಪದ್ಧತಿಯಂತೆ ಈ ಬಾರಿ ಕೂಡಾ ಕದ್ರಿ ಮಠದಲ್ಲಿ ಹಾಗೂ ಕದ್ರಿ ಕ್ಷೇತ್ರದಲ್ಲಿ ಸಿಯಾಳ ಅಭಿಷೇಕ ನೆರವೇರಿತು.

ಕದ್ರಿ ಮಠದ ಆವರಣದಲ್ಲಿ ಇರುವ ಪೂರ್ವ ಕಾಲದ ಮಠಾಧೀಶರ ಬೃಂದಾವನಗಳಲ್ಲಿ, ಶ್ರೀ ಕಾಳ ಬೈರವೇಶ್ವರ ಸಾನಿಧ್ಯದಲ್ಲಿ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಈ ಅಭಿಷೇಕ ಆರಾಧನೆ ನಡೆಯಿತು.

ಸಮುದ್ರ ಪೂಜೆ ನಡೆದ ಬಳಿಕ ಕದ್ರಿಯಲ್ಲಿ ಈ ಸಿಯಾಳ ಅಭಿಷೇಕವನ್ನು ಏಳು ಪಟ್ಟಣ ಮೊಗವೀರ ಸಂಯುಕ್ತ ಸಭಾದಿಂದ ಅನೇಕ ವರ್ಷಗಳಿಂದ ನಡೆಸಿ ಕೊಂಡು ಬರಲಾಗುತ್ತಿದೆ. ಸಂಯುಕ್ತ ಸಭಾದ ಪದಾಧಿಕಾರಿಗಳು, ಗುರಿಕಾರರು ಮತ್ತು ವಿವಿಧ ಗ್ರಾಮಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article