ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆಯವರ ವ್ಯಕ್ತಿತ್ವದ ತೇಜೋವಧೆ ಮತ್ತು ಅವಹೇಳನಕಾರಿ: ಹೇಳಿಕೆಗಳ ವಿರುದ್ಧ ಭಾರತೀಯ ಜೈನ್ ಮಿಲನ್ ಖಂಡನಾ ನಿರ್ಣಯ

ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆಯವರ ವ್ಯಕ್ತಿತ್ವದ ತೇಜೋವಧೆ ಮತ್ತು ಅವಹೇಳನಕಾರಿ: ಹೇಳಿಕೆಗಳ ವಿರುದ್ಧ ಭಾರತೀಯ ಜೈನ್ ಮಿಲನ್ ಖಂಡನಾ ನಿರ್ಣಯ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಪೂಜ್ಯ ಖಾವಂದರ ವ್ಯಕ್ತಿತ್ವದ ತೇಜೋವಧೆ ಮತ್ತು ಅವಹೇಳನಕಾರಿ ಹೇಳಿಕೆಗಳ ವಿರುದ್ಧ ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಉಜಿರೆಯಲ್ಲಿ ನಡೆದ ಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

8 ಶತಮಾನಗಳ ಘನ ಪರಂಪರೆಯನ್ನು ಹೊಂದಿರುವ ಜಾತಿ-ಮತ-ಧರ್ಮಗಳ ಭೇದವಿಲ್ಲದೆ ಚತುರ್ದಾನ ಪರಂಪರೆಯನ್ನು ನಡೆಸಿಕೊಂಡು ಬರುತ್ತಿರುವ ಕೋಟ್ಯಾಂತರ ಜನರ ಶ್ರದ್ಧಾ ಕೇಂದ್ರವಾಗಿರುವ ಪರಮ ಪವಿತ್ರ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜುನಾಥ ಸ್ವಾಮಿಯ ಆಶೀರ್ವಾದ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ, ಮಹಿಳಾ ಸಬಲೀಕರಣ, ಸರ್ವಧರ್ಮ ಸಮ್ಮೇಳನಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಜನಜಾಗೃತಿ ವೇದಿಕೆ, ರುಡ್ ಸೆಟ್ ಸಂಸ್ಥೆಗಳ ಸಮಾಜಮುಖಿ ಕಾರ್ಯಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೀಮಿತವಾಗಿರದೆ ದಾನ ಪರಂಪರೆ ಸಾಮಾಜಿಕ ಕಾರ್ಯಗಳನ್ನು ರಾಷ್ಟ್ರ ಮಟ್ಟಕ್ಕೆ ತಮ್ಮ ನಿರಂತರ ಪರಿಶ್ರಮ, ನಿಸ್ವಾರ್ಥ ಸೇವಾ ಮನೋಭಾವ, ಧರ್ಮನಿಷ್ಠೆಯ ಮೂಲಕ ವಿಸ್ತರಿಸಿದವರು ಕ್ಷೇತ್ರದ 21ನೇ ಧರ್ಮಾಧಿಕಾರಿಗಳಾದ ಹೆಗ್ಗಡೆಯವರು.

ಇಂತಹ ಪರಮ ಪವಿತ್ರ ಕ್ಷೇತ್ರ ಹಾಗೂ ಹೆಗ್ಗಡೆಯವರ ಶುದ್ಧ ವ್ಯಕ್ತಿತ್ವದ ವಿರುದ್ಧ ತಪ್ಪು ಹಾಗೂ ಅವಹೇಳನಕಾರಿ ಹೇಳಿಕೆಗಳು ನೀಡುತ್ತಿರುವುದು ಅತ್ಯಂತ ಖಂಡನೀಯ ವಿಚಾರ. ಇಂತಹ ತಪ್ಪು ಮಾಹಿತಿ ಹೇಳಿಕೆಗಳು ಸಮಾಜದ ಸ್ವಾಸ್ಥ್ಯ, ಹಿಂದೂ ಧಾರ್ಮಿಕ ನಂಬಿಕೆಗಳನ್ನು, ಸಂಸ್ಕೃತಿ ಪರಂಪರೆಗಳನ್ನು ಕೆಡಿಸುತ್ತಿದೆ. ಇಂತಹ ಅಸತ್ಯದ, ಅಧರ್ಮದ ಆರೋಪಗಳನ್ನು ಪ್ರಜ್ಞಾವಂತ ಶಿಕ್ಷಿತ ಸಮಾಜದ ಪ್ರಜೆಗಳಾದ ನಾವು ತೀವ್ರವಾಗಿ ಖಂಡಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಪರವಾಗಿ ಗಟ್ಟಿಯಾಗಿ ನಿಲ್ಲಬೇಕಾಗಿದೆ. ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿಗಳೊಂದಿಗೆ ನಾವು ಸದಾ ಬೆಂಬಲವಾಗಿರುತ್ತೇವೆ ಎಂಬ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ನಿರ್ದೇಶಕರಾದ ಬಿ. ಸೋಮಶೇಖರ ಶೆಟ್ಟಿ, ಪ್ರಮೋದ್ ಕುಮಾರ್ ಬಿ., ಅಧ್ಯಕ್ಷ ಡಾ. ನವೀನ್ ಕುಮಾರ್ ಜೈನ್, ಕಾರ್ಯದರ್ಶಿ ಸಂಪತ್ ಕುಮಾರ್ ಮತ್ತು ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article